ಮ್ಯಾಡ್ರಿಡ್: ಸ್ಪೇನ್ ನಿಂದ ಸ್ವಾಯತ್ತತೆ ಘೋಷಿಸಿಕೊಂಡಿರುವ ಕ್ಯಟಲೋನಿಯಾ ಜವಾಬ್ದಾರಿಯನ್ನು ಸ್ಪ್ಯಾನಿಷ್ ಉಪ ಪ್ರಧಾನಿಗೆ ತಾತ್ಕಾಲಿಕವಾಗಿ ವಹಿಸಲಾಗಿದೆ.
ಸ್ಪ್ಯಾನಿಷ್ ಸರ್ಕಾರ ಅ.28 ರಂದು ಸ್ಪೇನ್ ನ ಉಪಪ್ರಧಾನಿ ಸೊರಯಾ ಸಾನ್ಜ್ ಡಿ ಅವರಿಗೆ ಕ್ಯಟಲೋನಿಯಾದ ಜವಾಬ್ದಾರಿಯನ್ನು ವಹಿಸಲಾಗಿದೆ. ಅರೆ ಸ್ವಾಯತ್ತ ಪ್ರದೇಶವಾಗಿರುವ ಕ್ಯಟಲೋನಿಯಾದ ಮೇಲೆ ಸ್ಪೇನ್ ನೇರ ಆಡಳಿತ ಹೇರುವುದಕ್ಕೆ ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ಕ್ಯಟಲೋನಿಯಾದ ಸಂಸತ್ ಸ್ಪೇನ್ ನಿಂದ ಸ್ವಾಯತ್ತತೆ ಘೋಷಣೆ ಮಾಡಿಕೊಂಡಿತ್ತು. ಕ್ಯಟಲೋನಿಯಾದ ಸಂಸತ್ ನ ನಡೆಯ ಬೆನ್ನಲ್ಲೇ ಸ್ಪೇನ್ ಸೆನೆಟ್ ಅಲ್ಲಿನ ಪ್ರಧಾನಿಗೆ ಕ್ಯಟಲೋನಿಯಾ ಮೇಲೆ ನೇರ ಆಡಳಿತವನ್ನು ಹೇರುವ ಅಧಿಕಾರ ನೀಡಿತ್ತು.
ಕ್ಯಟಲೋನಿಯಾ ಸ್ವಾಯತ್ತತೆ ಘೋಷಿಸಿಕೊಂಡ ನಂತರ ಹೇಳಿಕೆ ಬಿಡುಗಡೆ ಮಾಡಿದ್ದ ಸ್ಪ್ಯಾನಿಷ್ ಸರ್ಕಾರ ಕ್ಯಟಲೋನಿಯಾದ ನಾಯಕರು, ಸರ್ಕಾರದ ಸದಸ್ಯರನ್ನು ವಜಾಗೊಳಿಸಿರುವುದಾಗಿ ತಿಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics