ವಿದೇಶ

ಸಾವಿರ ಕಿ.ಮೀ. ಉದ್ದದ ಸುರಂಗ ತೋಡಲು ಯೋಜನೆ ವರದಿ ಸುಳ್ಳು: ಚೀನಾ

Srinivas Rao BV
ಬೀಜಿಂಗ್: ಟಿಬೆಟ್‌ ನಲ್ಲಿರುವ ಬ್ರಹ್ಮಪುತ್ರ ನದಿಯನ್ನು ಹೈಜಾಕ್ ಮಾಡಲು  1 ಸಾವಿರ ಕಿ.ಮೀ ಉದ್ದದ ಸುರಂಗ ನಿರ್ಮಿಸುತ್ತಿರುವುದರ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಯೋಜನೆ ನಡೆಯುತ್ತಿರುವುದನ್ನು ಚೀನಾ ಅಲ್ಲಗಳೆದಿದೆ.
ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಬ್ರಹ್ಮಪುತ್ರ ನದಿಯನ್ನು ತಿರುಗಿಸಲು 1 ಸಾವಿರ ಕಿ.ಮೀ ಉದ್ದದ ಸುರಂಗ ನಿರ್ಮಿಸುತ್ತಿರುವ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯೋಜನೆ ಸತ್ಯವಲ್ಲ, ಸುಳ್ಳು ವರದಿ ಎಂದು ಹೇಳಿದ್ದಾರೆ. ಗಡಿ ಪ್ರದೇಶದ ನದಿ ಸಹಕಾರಕ್ಕೆ ಚೀನಾ ಹೆಚ್ಚಿನ ಮಹತ್ವ ನೀಡುತ್ತದೆ ಎಂದು ಚೀನಾ ವಕ್ತಾರರು ಹೇಳಿದ್ದಾರೆ. 
ಚೀನಾದ ಮರುಭೂಮಿ ಪ್ರದೇಶ ಕ್ಸಿನ್‌ ಜಿಯಾಂಗ್ ಪ್ರಾಂತ್ಯಕ್ಕೆ ನೀರುಣಿಸಲು ಚೀನಾ ಪ್ರಸ್ತುತ ಬ್ರಹ್ಮಪುತ್ರ ನದಿ ಸಾಗುತ್ತಿರುವ ಮಾರ್ಗವನ್ನೇ ಬದಲಿಸಿ, ಸುರಂಗ ಮೂಲಕ ನದಿಯ  ನೀರನ್ನು ಕ್ಲಿನ್ ಜಿಯಾಂಗ್ ಪ್ರಾಂತ್ಯಕ್ಕೆ ಹರಿಯಬಿಡಲು ಯೋಜನೆ ರೂಪಿಸಿದೆ ಎಂಬ ಅವರದಿ ಪ್ರಕಟವಾಗಿತ್ತು.
SCROLL FOR NEXT