ನಾಳೆ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣ ವಚನ ಸ್ವೀಕಾರ

ಈ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ದೀರ್ಘಕಾಲದ ಸಂಪ್ರದಾಯವನ್ನು ಮುರಿದು ಬಂಗಭಬನ್ ಬದಲಿಗೆ ಸಂಸತ್ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ನಡೆಸಲಾಗುತ್ತಿದೆ.
Tarique Rahman to take oath as Bangladesh's new PM on February 17
ತಾರಿಕ್ ರೆಹಮಾನ್
Updated on

ಢಾಕಾ: ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ(BNP) ಅಧ್ಯಕ್ಷ ತಾರಿಕ್ ರೆಹಮಾನ್(60) ಅವರು ಮಂಗಳವಾರ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇತ್ತೀಚಿಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಎನ್ ಪಿ ಸರ್ಕಾರ ರಚನೆಗೆ ಸಿದ್ಧತೆಗಳನ್ನು ಭರದಿಂದ ಆರಂಭಿಸಿದೆ.

ಈ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ದೀರ್ಘಕಾಲದ ಸಂಪ್ರದಾಯವನ್ನು ಮುರಿದು ಬಂಗಭಬನ್ ಬದಲಿಗೆ ಸಂಸತ್ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ನಡೆಸಲಾಗುತ್ತಿದೆ.

ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಜಾತಿಯಾ ಸಂಗ್ಸದ್‌ನ ದಕ್ಷಿಣ ಪ್ಲಾಜಾದಲ್ಲಿ ಹೊಸ ಸಂಪುಟ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

"ಸಂಸದೀಯ ಸಚಿವಾಲಯವು ನಾಳೆ ಸಂಜೆ 4:00 ಗಂಟೆಗೆ ಹೊಸ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಡೆಸಲಿದೆ. ಇದಕ್ಕೂ ಮೊದಲು, ಸಂಸತ್ ಸದಸ್ಯರು(ಸಂಸದರು) ಬೆಳಗ್ಗೆ 10:00 ಗಂಟೆಗೆ ಜಾತಿಯಾ ಸಂಗ್ಸದ್ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ" ಎಂದು ಜಾತಿಯಾ ಸಂಗ್ಸದ್ ಸಚಿವಾಲಯದ ಕಾರ್ಯದರ್ಶಿ ಕನಿಜ್ ಮೌಲಾ ಬಿಎಸ್‌ಎಸ್‌ಗೆ ತಿಳಿಸಿದ್ದಾರೆ.

Tarique Rahman to take oath as Bangladesh's new PM on February 17
ಬಾಂಗ್ಲಾ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿಗೆ ಆಹ್ವಾನ?

ಗಮನಾರ್ಹವಾಗಿ, ಸಂಸದೀಯ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಎನ್‌ಪಿ ನಾಳೆ ಬೆಳಗ್ಗೆ 11:30ಕ್ಕೆ ಸಂಸತ್ ಕಟ್ಟಡದಲ್ಲಿ ಸಂಸದೀಯ ಪಕ್ಷದ ಸಭೆಯನ್ನು ಕರೆದಿದೆ.

"ಬಹುಮತ ಪಡೆದ ಪಕ್ಷದ ನಾಯಕರಾಗಿ, ನಮ್ಮ ಪಕ್ಷದ ಅಧ್ಯಕ್ಷ ತಾರಿಕ್ ರೆಹಮಾನ್ ಪ್ರಧಾನಿಯಾಗುತ್ತಾರೆ" ಎಂದು ಬಿಎನ್‌ಪಿಯ ಸ್ಥಾಯಿ ಸಮಿತಿಯ ಸದಸ್ಯ ಸಲಾಹ್ ಉದ್ದೀನ್ ಅಹ್ಮದ್ ಅವರು ಹೇಳಿದ್ದಾರೆ.

ತಾರಿಕ್‌ ರೆಹಮಾನ್‌ ಅವರು ತಮ್ಮ ಪದಗ್ರಹಣಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಪ್ರಾದೇಶಿಕ ನಾಯಕರಿಗೆ ಆಹ್ವಾನ ನೀಡಿದ್ದು, ಬಾಂಗ್ಲಾದೇಶವು ಭಾರತದ "ನೆರೆಹೊರೆ ಮೊದಲು ನೀತಿ"ಯನ್ನು ಅನುಸರಿಸುವ ಮುನ್ಸೂಚನೆ ನೀಡಿದ್ದಾರೆ. ಆದರೆ ಮೋದಿ ಬದಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಾರಿಕ್ ಪ್ರಮಾಣವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಬಿರ್ಲಾ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com