ವಿದೇಶ

ಕೆನ್ನೆತ್ ಜಸ್ಟರ್ ಭಾರತದ ರಾಯಭಾರಿಯಾಗಿ ನೇಮಕ ಮಾಡಿದ ಡೊನಾಲ್ಡ್ ಟ್ರಂಪ್

Lingaraj Badiger
ನ್ಯೂಯಾರ್ಕ್: ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಹಾಯ ಮಾಡಿದ್ದ ಕೆನ್ನೆತ್ ಐ ಜಸ್ಟರ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ.
ಕೆನ್ನೆತ್ ಜಸ್ಟರ್ ಅವರನ್ನು ಭಾರತದ ರಾಯಭಾರಿಯಾಗಿ ನೇಮಕ ಮಾಡಲು ಡೊನಾಲ್ಡ್ ಟ್ರಂಪ್ ಅವರು ಒಪ್ಪಿಗೆ ನೀಡಿದ್ದಾರೆ ಮತ್ತು ಅದಕ್ಕೆ ಸೆನೆಟ್ ಅನುಮೋದನೆ ನೀಡಿದೆ ಎಂದು ಶುಕ್ರವಾರ ಸಂಜೆ ವೈಟ್ ಹೌಸ್ ತಿಳಿಸಿದೆ.
62 ವರ್ಷದ ಜಸ್ಟರ್ ಭಾರತಕ್ಕೆ ಅಮೆರಿಕದ ರಾಯಭಾರಿ ಆಗಲಿದ್ದಾರೆ ಎಂದು ಕಳೆದ ಜೂನ್‍ನಲ್ಲೇ ಶ್ವೇತಭವನ ಹೇಳಿತ್ತು. ಆದರೆ ಟ್ರಂಪ್ ಹಾಗೂ ಸೆನೆ ಟ್ ಅನುಮೋದನೆಗೆ ಕಾಯಲಾಗಿತ್ತು.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಕೆನ್ನೆಥ್, ಜಾರ್ಜ್ ಡಬ್ಲ್ಯು ಬುಷ್ ಅವರ ಅಧಿಕಾರಾವಧಿಯಲ್ಲಿ ವಾಣಿಜ್ಯ ವಿಭಾಗದ ಉಪಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ, ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಹಾಯಕ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
SCROLL FOR NEXT