ವಿದೇಶ

ಪ್ರೀತಿಸಿದವನಿಗಾಗಿ ರಾಜಕುಮಾರಿ ಪಟ್ಟ, ಅಂತಸ್ತು ಬಿಡಲು ಮುಂದಾದ ಜಪಾನ್ ರಾಜಕುಮಾರಿ

Vishwanath S
ಟೋಕಿಯೋ: ರಾಜಕುಮಾರಿ ಅಂದ ಮೇಲೆ ಆಕೆ ಮತ್ತೊಂದು ಮನೆತನದ ರಾಜಕುಮಾರ ಅಥವಾ ಸೆಲೆಬ್ರಿಟಿಗಳನ್ನು ಕೈ ಹಿಡಿಯುವುದು ಸಾಮಾನ್ಯ. ಆದರೆ ಜಪಾನ್ ನ ರಾಜಕುಮಾರಿ ಮಾಕೋ ಇದಕ್ಕೆ ಭಿನ್ನವಾಗಿ ಸಾಮಾನ್ಯ ಯುವಕನನ್ನು ಪ್ರೀತಿಸಿದ್ದು ಆತನಿಗಾಗಿ ರಾಜಮನೆತನ ಪಟ್ಟ ಹಾಗೂ ಅಂತಸ್ತನ್ನು ಬಿಡಲು ಮುಂದಾಗಿದ್ದಾಳೆ. 
ಜಪಾನ್ ಮಹಾರಾಜ ಅಖಿಹಿತೋ ಅವರ ಮೊಮ್ಮಗಳು. ರಾಜ ಅಖಿಶಿನೋ ಹಾಗೂ ಕಿಕೋ ದಂಪತಿ ಪುತ್ರಿ ಮಾಕೋ ಸಾಮಾನ್ಯ ಯುವಕ ಕೈ ಕೊಮುರೋ ಎಂಬಾತನನ್ನು ಪ್ರೀತಿಸಿ ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದಾರೆ ಇದಕ್ಕೆ ರಾಜಮನೆತನ ಕೂಡ ಗ್ರೀನ್ ಸಿಗ್ನಲ್ ನೀಡಿದೆ. 
ಜಪಾನ್ ಕಾನೂನು ಪ್ರಕಾರ ರಾಜಕುಮಾರಿ ರಾಜಮನೆತನದವರನ್ನು ಬಿಟ್ಟು ಸಾಮಾನ್ಯ ವ್ಯಕ್ತಿಯನ್ನು ಮದುವೆಯಾದರೆ ರಾಜಕುಮಾರಿ ಪಟ್ಟ ಕಳೆದುಕೊಳ್ಳಬೇಕಾಗುತ್ತದೆ. ಇದು ಗೊತ್ತಿದ್ದರು ಮಾಕೋ ಸಾಮಾನ್ಯ ಯುವಕನನ್ನು ಪ್ರೀತಿಸಿದ್ದರು. ಇನ್ನೊಂದು ಮುಖ್ಯ ಸಂಗತಿಯೆಂದರೇ ಜಪಾನ್ ನಲ್ಲಿ ಸದ್ಯ ಮಾಕೋ ಮದುವೆಯಾಗಲು ಯಾವ ರಾಜಕುಮಾರ ಕೂಡ ಇರದಿರುವುದು ಈ ಪ್ರೀತಿ ಸುಖಾಂತ್ಯಕ್ಕೆ ಸಹಾಯವಾಗಿದೆ. 
ಮಗಳ ಪ್ರೀತಿಯನ್ನು ಸಂತಸದಿಂದ ಒಪ್ಪಿಕೊಂಡಿರುವ ರಾಜ ಅಖಿಶಿನೋ ಹಾಗೂ ರಾಣಿ ಕಿಕೋ ಮುಂದಿನ ವರ್ಷ ವಿವಾಹ ಮಾಡಲು ನಿರ್ಧರಿಸಿದ್ದಾರೆ. ಇನ್ನು ಮಾಕೋ ರಾಜಮನೆತನದಿಂದ 8.3 ಕೋಟಿ ರುಪಾಯಿ ಮಾತ್ರ ಪಡೆಯಲಿದ್ದಾರೆ. 
SCROLL FOR NEXT