ವಿದೇಶ

ಮ್ಯಾನ್ಮಾರ್ ರೊಹಿಂಗ್ಯಾ ಕಳವಳ ಭಾರತಕ್ಕೆ ಅರ್ಥವಾಗುತ್ತದೆ: ಪ್ರಧಾನಿ ಮೋದಿ

Manjula VN
ನೈಪೈಡಾ: ಮ್ಯಾನ್ಮಾರ್'ನ ರೊಖೈನ್ ರಾಜ್ಯದ ರೊಹಿಂಗ್ಯಾ ಬಿಕ್ಕಟ್ಟು ತೀವ್ರಗೊಂಡಿರುವ ನಡುವೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚೆ ಬುಧವಾರ ಚರ್ಚೆ ನಡೆಸಿದ್ದಾರೆ. 
ಸೂಕಿ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಪ್ರಧಾನಿ ಮೋದಿಯವರು ಜನಾಂಗೀಯ ದ್ವೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.. ಹಿಂಸಾಚಾರದಿಂದಾಗಿ ರೊಹಿಂಗ್ಯಾ ಮುಸ್ಲಿಮರು ಭಾರತದತ್ತ ಸಾಮೂಹಿತ ವಲಸೆ ಹೋಗುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ಉಭಯ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ಮ್ಯಾನ್ಮಾರ್ ನಾಯಕಿ ಜೊತೆಗಿನ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು, ಪೂರ್ವ ದೇಶಗೊಳೊಂದಿಗೆ ವ್ಯವಹರಿಸುವ ಭಾರತದ ನೀತಿಯಲ್ಲಿ ಮ್ಯಾನ್ಮಾರ್ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳಿದ್ದಾರೆ. 
ಮ್ಯಾನ್ಮಾರ್ ಜೊತೆಗಿನ ಸಂಬಂಧಗಳನ್ನು ವೃದ್ಧಿಸುವುದು ಭಾರತಕ್ಕೆ ಆದ್ಯತೆಯ ವಿಷಯವಾಗಿದೆ. ಮ್ಯಾನ್ಮಾರ್ ಭಾರತದ ಪ್ರಮುಖ ನೆರೆಯ ರಾಷ್ಟ್ರವೂ ಆಗಿದೆ ಎಂದು ತಿಳಿಸಿದ್ದಾರೆ. 
ಮ್ಯಾನ್ಮಾನರ್ ಅಭಿವೃದ್ಧಿಗೆ ಭಾರತ ಮಹತ್ತರ ಕಾಣಿಕೆ ನೀಡಲು ಬಯಸಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವುದು ಭಾರತದ ಮಂತ್ರವಾಗಿದೆ. ಮ್ಯಾನ್ಮಾರ್ ರೊಹಿಂಗ್ಯಾ ಕಳವಳ ಭಾರತಕ್ಕೆ ಅರ್ಥವಾಗುತ್ತದೆ. ಭಾರತಕ್ಕೆ ಭೇಟಿ ನೀಡಲು ಬಯಸುವ ಮ್ಯಾನ್ಮಾರ್ ನಾಗರಿಕರಿಗೆ ಶೀಘ್ರದಲ್ಲಿಯೇ ಉಚಿತ ವೀಸಾಗಳನ್ನು ನೀಡಲಾಗುತ್ತದೆ. ರೊಹಿಂಗ್ಯಾ ಬಿಕ್ಕಟ್ಟು ಪರಿಹಾರಗೊಳ್ಳುವುದನ್ನು ಭಾರತದ ಬಯಸುತ್ತದೆ ಎಂದಿದ್ದಾರೆ. 
SCROLL FOR NEXT