ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವುದು 
ವಿದೇಶ

ಡೋಕ್ಲಾಮ್ ಮಾದರಿ ಬಿಕ್ಕಟ್ಟಿಗೆ ಇನ್ನಿಲ್ಲ ಅವಕಾಶ: ಭಾರತ-ಚೀನಾ ತೀರ್ಮಾನ

ಭವಿಷ್ಯದಲ್ಲಿ ಡೋಕ್ಲಾಮ್'ನಂತಹ ಮತ್ತೊಂದು ಬಿಕ್ಕಟ್ಟು ಎದುರಾಗದಂತೆ ತಡೆಯುವುದಕ್ಕಾಗಿ ಪಂಚಶೀಲ ತತ್ವಕ್ಕೆ ಮರಳುವ ಮಹತ್ವದ ಸಂಧಾನ ಸೂತ್ರವೊಂದಕ್ಕೆ ಭಾರತ ಹಾಗೂ ಚೀನಾ ರಾಷ್ಟ್ರಗಳು ಸಹಮತದ ಮುದ್ರೆ ಒತ್ತಿವೆ...

ಕ್ಸಿಯಾಮೆನ್: ಭವಿಷ್ಯದಲ್ಲಿ ಡೋಕ್ಲಾಮ್'ನಂತಹ ಮತ್ತೊಂದು ಬಿಕ್ಕಟ್ಟು ಎದುರಾಗದಂತೆ ತಡೆಯುವುದಕ್ಕಾಗಿ ಪಂಚಶೀಲ ತತ್ವಕ್ಕೆ ಮರಳುವ ಮಹತ್ವದ ಸಂಧಾನ ಸೂತ್ರವೊಂದಕ್ಕೆ ಭಾರತ ಹಾಗೂ ಚೀನಾ ರಾಷ್ಟ್ರಗಳು ಸಹಮತದ ಮುದ್ರೆ ಒತ್ತಿವೆ. 
ಉಭಯ ರಾಷ್ಟ್ರಗಳ ನಡುವೆ ಎದುರಾಗಿದ್ದ ಡೋಕ್ಲಾಮ್ ಬಿಕ್ಕಟ್ಟಿಗೆ ತೆರೆಬಿದ್ದ ಬಳಿಕ ಇದೇ ಮೊದಲ ಬಾರಿ ಬ್ರಿಕ್ಸ್ ಸಮಾವೇಶದ ವೇದಿಕೆಯಲ್ಲಿ ಪರಸ್ಪರ ಮುಖಾಮುಖಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಇಂಥಹದ್ದೊಂದು ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ. 
ಭಾರತ-ಚೀನಾ-ಭೂತಾನ್ ಗಡಿಯಲ್ಲಿರುವ ಡೋಕ್ಲಾಮ್ ಪ್ರದೇಶದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಮಧ್ಯೆ ಭಾರಿ ಜಟಾಪಟಿ ನಡೆದ ಬೆನ್ನಲ್ಲೇ ಪರಿಸ್ಥಿತಿ ಇದೀಗ ಸಂಪೂರ್ಣ ಶಾಂತಗೊಂಡಂತೆ ಕಂಡು ಬಂದಿದೆ. 
ಈ ವಿವಾದವನ್ನು ಮರೆತುಮುಂದೆ ಸಾಗಲು ಉಭಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದು, ಈ ಮೂಲಕ ಉಭಯ ದೇಶಗಳ ನಾಯಕರು ಹಿಂದಿ-ಚೀನಾ ಭಾಯಿ ಭಾಯಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. 
ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷರೊಂದಿಗೆ ಪ್ರತ್ಯೇಕವಾಗಿ 1 ತಾಸು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಮಾತುಕತೆ ಫಲಪ್ರದವಾಗಿತ್ತು ಎಂದು ಮೋದಿಯವರು ಹೇಳಿದರು. 
ಇದರಂತೆ ಡೋಕ್ಲಾಮ್ ನಂಥಹ ವಿವಾದಗಳು ಮತ್ತೆ ಮರುಕಳಿಸದಂತೆ ಆಗಲೂ ಉಭಯ ದೇಶಗಳ ಯೋಧರ ನಡುವೆ ಪರಸ್ಪರ ಸಹಕಾರ ವೃದ್ಧಿಸಲು ಕ್ರಮ ಜರುಗಿಸಬೇಕು ಎಂಬ ತೀರ್ಮಾನಕ್ಕೆ ಉಭಯ ನಾಯಕರು ಬಂದರು. 
ಉಭಯ ದೇಶಗಳ ನಾಯಕರ ಮಾತುಕತೆ ಕುರಿತಂತೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು, ಗಡಿಯಲ್ಲಿ ಶಾಂತಿ ಕಾಯ್ಡುಕೊಳ್ಳಲು ಬದ್ಧತೆ ವ್ಯಕ್ತಪಡಿಸಲಾಯಿತು. ಉಭಯ ನಾಯಕರು ಹಿಂದಿನದ್ದನ್ನು ಬಿಟ್ಟು ಮುಂದಡಿ ಇರಿಸುವತ್ತ ಒಲವು ತೋರಿದರು ಎಂದರು. 
ಈ ಮೂಲಕ ಡೋಕ್ಲಾಮ್ ವಿವಾದವನ್ನು ಬದಿಗೆ ಸರಿಸಲು ಕ್ಸಿ ಮತ್ತು ಮೋದಿ ನಿರ್ಧರಿಸಿದ ಬಗ್ಗೆ ಜೈಶಂಕರ್ ಅವರು ಸೂಚ್ಯವಾಗಿ ಹೇಳಿದರು. ಎರಡೂ ದೇಶಗಳ ನಡುವೆ ಪರಸ್ಪರ ವಿಶ್ವಾಸ ವೃದ್ಧಿಸಲು ಮತ್ತು ಬಲಗೊಳಿಸಲು ಮೋದಿ ಮತ್ತು ಕ್ಸಿ ಬದ್ಧತೆ ವ್ಯಕ್ತಪಡಿಸಿದರು. 
ಇತ್ತೀಚೆಗೆ ನಡೆದ ಘಟನೆಗಳು ಮತ್ತೆ ಮರುಕಳಿಸದಂತೆ ಪರಸ್ಪರ ಸಹಕಾರದಿಂದ ವರ್ತಿಸಲು ಸಹಮತ ವ್ಯಕ್ತಪಡಿಸಿದರು ಎಂದೂ ವಿದೇಶಾಂಗ ಕಾರ್ಯದರ್ಶಿಗಳು ತಿಳಿಸಿದರು. 
ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್ ಬೀಜಿಂಗ್ ನಲ್ಲಿ ಮಾತನಾಡಿ, ಭಾರತ-ಚೀನಾ ನಡುವಿನ ಪಂಚಶೀಲ ತತ್ವಗಳನ್ನು ಎತ್ತಿಹಿಡಿಯಲು ಚೀನಾ ಬದ್ಧವಾಗಿದೆ. ಕಳೆದ ಕೆಲವು ದಿನಗಳಿಂದ ಬ್ರಿಕ್ಸ್ ವೇದಿಕೆಯಲ್ಲಿ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಜತೆ ಪರಸ್ಪರ ಸಹಕಾರದಿಂದ ಕೆಲಸ ಮಾಡವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಸಮ್ಮಿಶ್ರ ಸಹಕಾರದೊಂದಿಗೆ ಹೊಸ ಅಭ್ಯುದಯಕ್ಕೆ ನಾಂದಿ ಹಾಡಲು ಎಳ್ಲರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಚೀನಾ ಸಿದ್ಧವಿಗೆ ಎಂದು ಕ್ಸಿ ಹೇಳಿದ್ದಾರೆಂದು ತಿಳಿಸಿದರು. 
ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ದಶಸೂತ್ರ
ಪಾಕಿಸ್ತಾನದ ಉಗ್ರ ಸಂಘಟನೆಗಳ ವಿರುದ್ಧ ಹೋರಾಡಲು ಬ್ರಿಕ್ಸ್ ಶೃಂಗಸಭೆ ಕರೆ ನೀಡಿದ ಯಶಸ್ಸಿನ ಉತ್ಸಾಹದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಶೃಂಗದ ಅಂತ್ಯದ ವೇಳೆ ಮತ್ತೆ ಭಯೋತ್ಪಾದನೆಯ ವಿರುದ್ಧ ಸಮರಕ್ಕೆ ಕರೆ ನೀಡಿದರು, ಅಲ್ಲದೆ, ಜಗತ್ತು ಸುಧಾರಣೆಗೊಂಡು ಹೊಸ ರೂಪ ತಾಳಲು 10 ಸೂತ್ರಗಳನ್ನು ಪಠಿಸಿ ಗಮನ ಸೆಳೆದರು. 
ಮೋದಿಯವರ 10 ಆದರ್ಶದಾಯಕ ನೀತಿಗಳು ಇಂತಿವೆ...
  1. ಸುರಕ್ಷಿತ ವಿಶ್ವ ಸೃಷ್ಟಿ: ಭಯೋತ್ಪಾದನೆ ನಿಗ್ರಹ, ಸೈಬರ್ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಂಘಟಿತ ಮತ್ತು ಸಹಕಾರ ಕಾರ್ಯತಂತ್ರ.
  2. ಹಸಿರು ಜಗತ್ತು ಸೃಷ್ಟಿ: ಅಂತರಾಷ್ಟ್ರೀಯ ಸೌರ ಒಕ್ಕೂಟದಂತಹ ಸಂಸ್ಥೆಗಳ ಜೊತೆಗೆ ಕೈಜೋಡಿಸಿ, ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಬಳಕೆ ಮಾಡುವ ಮೂಲಕ ಹವಾಮಾನ ಬದಲಾವಣೆ ಸಮಸ್ಯೆ ಪರಿಹರಿಸಲು ಸಂಘಟಿತ ಪ್ರಯತ್ನ.
  3. ಸಕ್ರಿಯ ಜಗತ್ತು ಸೃಷ್ಟಿ: ಪರಸ್ಪರ ಸಾಮರ್ಥ್ಯ ಹೆಚ್ಚಳ, ಆರ್ಥಿಕ ಸುಧಾರಣೆ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಹೊಂದಿಕೊಳ್ಳುವ ತಂತ್ರಜ್ಞಾನಗಳ ಅಳವಡಿಕೆ ಮತ್ತು ವಿನಿಮಯ.
  4. ಒಳಗೊಳ್ಳುವಿಕೆ ಜಗತ್ತು ಸೃಷ್ಟಿ: ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಬ್ರಿಕ್ಸ್ ಸೇರಿ ಎಲ್ಲಾ ರಾಷ್ಟ್ರಗಳ ಪ್ರಜೆಗಳನ್ನು ಒಳಗೊಳ್ಳಿಸುವಿಕೆ ಮತ್ತು ಮುಖ್ಯವಾಹಿನಿಗೆ ತರುವುದು. 
  5. ಡಿಜಿಟಲ್ ಜಗತ್ತು ಸೃಷ್ಟಿ: ಬ್ರಿಕ್ಸ್ ರಾಷ್ಟ್ರಗಳಲ್ಲಿನ ಆಂತರಿಕ ಮತ್ತು ಬಹಿರಂಗ ಆರ್ಥಿಕ ವಿಭಜನೆಯ ಕಂದಕವನ್ನು ಕಿರಿದಾಗಿಸುವುದು. 
  6. ಕುಶಲ ಜಗತ್ತು ಸೃಷ್ಟಿ: ಬ್ರಿಕ್ಸ್ ರಾಷ್ಟ್ರಗಳಲ್ಲಿ ಯಥೇಚ್ಚವಾಗಿ ಲಭ್ಯವಿರುವ ಯುವ ಪ್ರತಿಭೆಗಳ ಕೌಶಲಾಭಿವೃದ್ಧಿಗೆ ಒತ್ತುಕೊಡುವುದು. 
  7. ಆರೋಗ್ಯ ಜಗತ್ತು ಸೃಷ್ಟಿ: ಸಾಂಕ್ರಾಮಿಕ ರೋಗಗಳು ಸೇರಿ ವಿವಿಧ ರೋಗಗಳನ್ನು ಗುಣಪಡಿಸಲು ಅಗತ್ಯ ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಎಲ್ಲರಿಗೂ ಸುಲಭದರದಲ್ಲಿ ಆರೋಗ್ಯ ಸೇವೆ ಲಭಿಸುವಂತೆ ಮಾಡುವುದು. 
  8. ಸಮಾನತೆಯ ಜಗತ್ತು ಸೃಷ್ಟಿ: ಎಲ್ಲರಿಗೂ ಸಮಾನ ಅವಕಾಶಗಳು ಪ್ರಮುಖವಾಗಿ ಲಿಂಗ ಸಮಾನತೆ ಒತ್ತು ಕೊಡುವುದು. 
  9. ಸಂಪರ್ಕ ಜಗತ್ತು ಸೃಷ್ಟಿ: ಸರಕು, ಜನ ಮತ್ತಿತರ ಸೇವೆಗಳು ಆರಾಮದಾಯಕವಾಗಿ ಸಿಗುವಂತೆ ಮಾಡುವುದು. 
  10. ಸೌಹಾರ್ದ ಜಗತ್ತು ಸೃಷ್ಟಿ: ಶಾಂತಿಯುತ ಸಹಬಾಳ್ವೆ ಮತ್ತು ಸೌಹಾರ್ದತೆಗೆ ಒತ್ತು ನೀಡುವ ತತ್ವಾದರ್ಶಗಳು, ಪರಂಪರೆ ಮತ್ತು ಆಚರೆಗಳನ್ನು ಪ್ರಚುರಪಡಿಸುವುದು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT