ಲಂಡನ್ ಅಂಡರ್ಗ್ರೌಂಡ್ ಮೆಟ್ರೊ ಸ್ಟೇಶನ್ ನಲ್ಲಿ ಸ್ಫೋಟ
ಲಂಡನ್: ಲಂಡನ್ ನ ಅಂಡರ್ಗ್ರೌಂಡ್ ಮೆಟ್ರೊ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದೆ. ಸೌತ್-ವೆಸ್ಟ್ ಲಂಡನ್ ನ ಪಾರ್ಸನ್ಸ್ ಗ್ರೀನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 22 ಮಂದಿಗೆ ಗಾಯಗಳಾಗಿವೆ.
ಘಟನೆಯ ಬಗ್ಗೆ ಟ್ರಾನ್ಸ್ಪೋರ್ಟ್ ಫಾರ್ ಲಂಡನ್ ಟ್ವೀಟ್ ಮಾಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎರ್ಲ್ಸ್ ಕೋರ್ಟ್ ಮತ್ತು ವಿಂಬಲ್ಡನ್ ನಡುವಿನ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಗಾರ್ಡಿಯನ್ ವರದಿಯ ಪ್ರಕಾರ ಸ್ಫೋಟ ಸಂಭವಿಸುತ್ತಿದ್ದಂತೆಯೇ ಗಾಬರಿಗೊಂಡ ಪ್ರಯಾಣಿಕರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಕಾಲ್ತುಳಿತ ಉಂಟಾಗಿ 22 ಮಂದಿಗೆ ಗಾಯಗಳಾಗಿವೆ. ಮೆಟ್ರೋ ನಿಲ್ದಾಣದಲ್ಲಿ ಸ್ಫೋಟ ನಡೆದಿರುವುದನ್ನು ಉಗ್ರರ ಕೃತ್ಯ ಎಂದು ಘೋಷಿಸಲಾಗಿದೆ.