ಹತ್ಯೆಯಾದ ಭಾರತೀಯ ಮೂಲದ ವೈದ್ಯ ಅಚ್ಯುತ ರೆಡ್ಡಿ
ಕನ್ಸಾಸ್: ಭಾರತೀಯ ಮೂಲದ ವೈದ್ಯರೊಬ್ಬರನ್ನು ಚೂರಿ ಇರಿದು ಹತ್ಯೆ ಮಾಡಿರುವ ಘಟನೆ ಅಮೆರಿಕಾದ ಕನ್ಸಾಸ್ ನಲ್ಲಿ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತೆಲಂಗಾಣ ಮೂಲದ ಅಚ್ಯುತ ರೆಡ್ಡಿ (57) ಹತ್ಯೆಯಾದ ಭಾರತೀಯ ಮೂಲದ ವೈದ್ಯರಾಗಿದ್ದಾರೆ. ಕಳೆದ 7 ತಿಂಗಳಿನಿಂದ ಅಚ್ಯುತ ರೆಡ್ಡಿಯವರು ಅಮೆರಿಕಾದ ಕನ್ಸಾಸ್ ನಲ್ಲಿ ಮನೋವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹತ್ಯೆಯಾ ಮಾಡಿದ ವ್ಯಕ್ತಿಯನ್ನು ಉಮರ್ ರಷೀದ್ ದತ್ ಎಂದು ಗುರ್ತಿಸಲಾಗಿದೆ. ಅಚ್ಯುತ್ ವಿಚಿಟಾದಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಇದೇ ಕ್ಲಿನಿಕ್ ನಲ್ಲಿಯೇ ಬುಧವಾರ ರಾತ್ರಿ ರಷೀದ್ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಬಳಿಕ ವೈದ್ಯರೊಂದಿಗೆ ಮಾತಿನ ಚಕಮಕಿಗಿಳಿದ ದುಷ್ಕರ್ಮಿ ಅಚ್ಯುತ್ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ್ದ ವ್ಯಕ್ತಿ ಅಚ್ಯುತ್ ಅವರ ರೋಗಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಚ್ಯುತ್ ಅವರು ನಲಗೊಂಡ ಜಿಲ್ಲೆಯವರಾಗಿದ್ದು, 1986ರಲ್ಲಿ ಉಸ್ಮಾನಿಯಾ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಅಮೆರಿಕಾಗೆ ತೆರಳಿ ಅಲ್ಲಿಯೇ ನೆಲೆಯೂರಿದ್ದರು. ವಿಚಿಟಾದಲ್ಲಿನ ಕಾನ್ಸಾಸ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯದಲ್ಲಿ ಮನೋವೈದ್ಯ ಶಾಸ್ತ್ರವನ್ನು ಅಚ್ಯುತ್ ಪೂರ್ಣಗೊಳಿಸಿದ್ದರು.
ಇದೇ ರೀತಿ ಕೆಲ ತಿಂಗಳ ಹಿಂದೆ ಕೂಡ ಹೈದರಾಬಾದ್ ಮೂಲಕ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಕಾನ್ಸಾಸ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.