ಸಿಯೋಲ್: ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿರುವ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಅಮೆರಿಕ ಮುಂದಾಗಿದ್ದು, ಕೊರಿಯನ್ ಪರ್ಯಾಯ ದ್ವೀಪದ ಮೇಲೆ ಅಮೆರಿಕಾದ ಫೈಟರ್ ಜೆಟ್, ಬಾಂಬರ್ ಗಳು ಹಾರಾಟ ನಡೆಸಿವೆ.
ಅಮೆರಿಕ-ದಕ್ಷಿಣ ಕೊರಿಯಾ ಮೈತ್ರಿಯ ಶಕ್ತಿಯನ್ನು ಪ್ರದರ್ಶಿಸಲು ನಾಲ್ಕು F-35B ಫೈಟರ್ ಗಳು ಹಾಗೂ ಎರಡು ಬಿ-1 ಬಿ ಬಾಂಬರ್ ಗಳು ಕೊರಿಯಾದ ದ್ವೀಪದ ಮೇಲೆ ಹಾರಟ ನಡೆಸಿವೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ ಹೇಳಿದೆ.
ಉತ್ತರ ಕೊರಿಯಾ 6ನೆಯ ಹಾಗೂ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಪರೀಕ್ಷೆ ಮಾಡಿ, ಅಮೆರಿಕ, ಜಪಾನ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಜೆಟ್ ಗಳು ಹಾಗೂ ದಕ್ಷಿಣ ಕೊರಿಯಾದ ಫೈಟರ್ ಜೆಟ್ ಗಳು ಯುದ್ಧತಾಲೀಮು ನಡೆಸುತ್ತಿವೆ.