ಟೋಕಿಯೋ: ಉತ್ತರ ಕೊರಿಯಾದ ಪರ್ಯಾಯ ದ್ವೀಪದ ಬಳಿ ಅಮೆರಿಕ ಫೈಟರ್ ಜೆಟ್ ಗಳು ಹಾರಾಟ ನಡೆಸಿದ ಬೆನ್ನಲ್ಲೇ ಜಪಾನ್ ಕೊರಿಯಾದ ಬಳಿ ಕ್ಷಿಪಣಿ ಪ್ರತಿಬಂಧಕ ನಿಯೋಜಿಸಿದೆ.
ಹೊಕ್ಕಾಯ್ಡೊ ದ್ವೀಪದ ಬಳಿ ಜಪಾನ್ ಪ್ರತಿಬಂಧಕ ಕ್ಷಿಪಣಿ ನಿಯೋಜಿಸಿದ್ದು, ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಜಪಾನ್ ಕ್ಷಿಪಣಿ ಪ್ರತಿಬಂಧಕ ಯುನಿಟ್ ನ್ನು ನಿಯೋಜಿಸಿದೆ. 34 ಪಿಎಸಿ-3 ಯುನಿಟ್ ನ್ನು ನಿಯೋಜಿಸಲಾಗಿದೆ.
ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ ಜಪಾನ್ ಹಾಗೂ ಅಮೆರಿಕ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೆ.18 ರಂದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಅಮೆರಿಕ ಉತ್ತರ ಕೊರಿಯಾದ ಪರ್ಯಾಯ ದ್ವೀಪದ ಬಳಿ ಫೈಟರ್ ಜೆಟ್ ಗಳ ಹಾರಾಟ ನಡೆಸಿತ್ತು.