ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ (ಸಂಗ್ರಹ ಚಿತ್ರ) 
ವಿದೇಶ

1971ರಲ್ಲಿ ಪಾಕಿಸ್ತಾನ ಸೇನೆಯಿಂದ ಬಾಂಗ್ಲಾದೇಶದಲ್ಲಿ ಜನಾಂಗೀಯ ಹತ್ಯೆ: ಶೇಖ್ ಹಸೀನಾ

ಪಾಕಿಸ್ತಾನದ ಸೇನೆ 1971ರಲ್ಲಿ ‘ಪೈಶಾಚಿಕ’ ಸೇನಾ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದ 30 ಲಕ್ಷ ಅಮಾಯಕ ಜನರ ‘ಜನಾಂಗೀಯ ಹತ್ಯೆ’ ಮಾಡಿತ್ತು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ನ್ಯೂಯಾರ್ಕ್: ಪಾಕಿಸ್ತಾನದ ಸೇನೆ 1971ರಲ್ಲಿ ‘ಪೈಶಾಚಿಕ’ ಸೇನಾ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದ 30 ಲಕ್ಷ ಅಮಾಯಕ ಜನರ ‘ಜನಾಂಗೀಯ ಹತ್ಯೆ’ ಮಾಡಿತ್ತು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾತನಾಡಿದ ಹಸೀನಾ, 1971ರ ಬಾಂಗ್ಲೇ ವಿಮೋಚನೆಯ ರಕ್ತಪಾತವನ್ನು ನೆನಪಿಸಿಕೊಂಡರು. "ಪಾಕಿಸ್ತಾನ ತನ್ನ ಸ್ವಾರ್ಥಕ್ಕಾಗಿ 1971ರಲ್ಲಿ  ಬಾಂಗ್ಲಾದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ 30 ಲಕ್ಷ ಅಮಾಯಕ ಜನರ  ಸಾವಿಗೆ ಕಾರಣವಾಗಿತ್ತು. ಅಂದಿನ ಬಾಂಗ್ಲಾ ‘ಬಿಡುಗಡೆಯ ಯುದ್ಧ’ದ ಸಂದರ್ಭದಲ್ಲಿ ಹತರಾದ ಜನರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ತನ್ನ ದೇಶದ  ಸಂಸತ್ತು ಇತ್ತೀಚೆಗೆ ಮಾರ್ಚ್ 25ನ್ನು ‘ಜನಾಂಗೀಯ ಹತ್ಯೆ ದಿನ’ ಎಂದು ಘೋಷಿಸಿದೆ" ಎಂದು ಹೇಳಿದರು.

1971 ಮಾರ್ಚ್ 25ರ ಮಧ್ಯರಾತ್ರಿ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ಹಠಾತ್ ದಮನ ಕಾರ್ಯಾಚರಣೆ ನಡೆಸಿದ ಬಳಿಕ 1971ರ ಯುದ್ಧ ಸ್ಫೋಟಗೊಂಡಿತು ಹಾಗೂ ಯುದ್ಧವು ಡಿಸೆಂಬರ್ 16ರಂದು  ಕೊನೆಗೊಂಡಿತು. ಅದೇ ವರ್ಷ ಪಾಕಿಸ್ತಾನ ಸೋಲೊಪ್ಪಿಕೊಂಡಿತು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸೈನಿಕರನ್ನು ಒಳಗೊಂಡ ಮಿತ್ರಪಡೆಗಳಿಗೆ ಢಾಕಾದಲ್ಲಿ ಪಾಕ್ ಸೇನೆ ಶರಣಾಯಿತು. ಒಂಬತ್ತು  ತಿಂಗಳ ಕಾಲ ನಡೆದ ಯುದ್ಧದಲ್ಲಿ ಅಧಿಕೃತವಾಗಿ 30 ಲಕ್ಷ ಜನರು ಮೃತಪಟ್ಟಿದ್ದರು ಎಂದು ಶೇಕ್ ಹಸೀನಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸ್ಪರ್ಧೆಗಳ ಸಂಕೀರ್ಣ ಸಮಯಗಳೊಂದಿಗೆ ಜಗತ್ತು ಹೋರಾಡುತ್ತಿದೆ, ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ': ಜೈಶಂಕರ್ ಖಡಕ್ ಸಂದೇಶ

'ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ಕಾಲ ನಾನೇ ಮುಖ್ಯಮಂತ್ರಿ': ಸಿದ್ದರಾಮಯ್ಯ ಮಾರ್ಮಿಕ ಹೇಳಿಕೆ!

ಥೂ ಏನ್ ಗುರು.. ಆಗ ಅಶ್ವಿನಿ ಗೌಡ.. ಈಗ ಗಿಲ್ಲಿ.. ಕ್ಯಾಪ್ಟನ್ ಗೆ ಬೆಲೆನೇ ಇಲ್ಲ..: ರಘು ಫುಲ್ ರೋಸ್ಟ್ Video

ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: 145 ಕೆಜಿ ತೂಕ ಎತ್ತಿ ಪದಕ ಪಡೆದ 7 ತಿಂಗಳ ಗರ್ಭಿಣಿ; ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ಸಾಧನೆಗೆ ಅಭಿನಂದನೆಗಳ ಮಹಾಪೂರ!

ಮೊನ್ನೆ ನೇಮಕ, ಇಂದು RSS ಕಾರ್ಯಕರ್ತನ ಹೆಸರು ತೆಗೆದು ಹಾಕಿದ ಸರ್ಕಾರ; ಸಿಎಂಗೆ ಕ್ಷಮೆ ಕೇಳುತ್ತೇನೆ!

SCROLL FOR NEXT