ಲಾಹೊರ್(ಪಾಕಿಸ್ತಾನ): ಗಾಳಿಯಿಂದ ಮೇಲ್ಮೈ ಹಡಗು ವಿರುದ್ಧದ ಕ್ಷಿಪಣಿ(ಆ್ಯಂಟಿ ಶಿಪ್ ಮಿಸ್ಸೈಲ್ ಟೆಸ್ಟ್) ಸೀ ಕಿಂಗ್ ನ್ನು ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನ ನೌಕಾಪಡೆ ಇಂದು ಯಶಸ್ವಿಯಾಗಿ ಉಡಾಯಿಸಿದೆ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.
ಗಾಳಿಯಿಂದ ಮೇಲ್ಮೈಯಾಗಿ ಹಡಗು ವಿರುದ್ಧದ ಕ್ಷಿಪಣಿಯ ನೇರ ಶಸ್ತಾಸ್ತ್ರ ಪರೀಕ್ಷಾರ್ಥ ಉಡಾವಣೆ ನಡೆಸಿತು. ಇದು ಯಶಸ್ವಿಯಾಗಿ ನಿಖರವಾಗಿ ಉದ್ದೇಶಿತ ಗುರಿಯನ್ನು ಹೊಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಉಡಾವಣೆ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನ ನೌಕಾಪಡೆ ಮುಖ್ಯಸ್ಥ ಅಡ್ಮೈರಲ್ ಮುಹಮ್ಮದ್ ಜಕುಲ್ಲಾಹ್, ಕ್ಷಿಪಣಿ ಸಮರಕ್ಕೆ ಸಿದ್ಧವಾಗಿದೆ ಎಂದು ಹೇಳಿದರು. ಪಾಕಿಸ್ತಾನದ ನೌಕಾಪಡೆಯ ಉನ್ನತ ಮಟ್ಟದ ಸಿದ್ಧತೆ ಮತ್ತು ವೃತ್ತಿಪರತೆಯನ್ನು ಕ್ಷಿಪಣಿಯ ಯಶಸ್ವಿ ಉಡಾವಣೆ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.