ನ್ಯೂಯಾರ್ಕ್: ಉಗ್ರವಾದ ಜಗತ್ತಿನ ಅತೀ ದೊಡ್ಡ ಪಿಡುಗಾಗಿದ್ದು ಜಾಗತಿಕ ಸಮುದಾಯ ಒಟ್ಟಾಗಿ ಸೇರಿ ಇದರ ವಿರುದ್ಧ ಹೋರಾಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂಜೆ ಅಕ್ಬರ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿಯಿಲ್ಲದೇ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ಶಾಂತಿಗೆ ಭಂಗ ತರುತ್ತಿರುವ ಉಗ್ರವಾದವನ್ನು ಯಾವುದೇ ಮುಲಾಜಿಲ್ಲದೆ ಕಿತ್ತೊಗೆಯಬೇಕಿದೆ ಎಂದು ಹೇಳಿದ್ದಾರೆ.
ಬ್ರಿಕ್ಸ್ ಘೋಷವಾಕ್ಯವನ್ನು ಉಲ್ಲೇಖಿಸಿದ ಅಕ್ಬರ್ ಅವರು, ಲಷ್ಕರ್ ಇ ತೊಯ್ಬಾ ಹಾಗೂ ಜೈಷ್ ಸಂಘಟನೆಗಳನ್ನು ಮೊದಲ ಬಾರಿಗೆ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಎಂದು ಘೋಷಿಸಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಲ್ಲದೇ ಅವರಿಗೆ ಆಶ್ರಯ ನೀಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
21ನೇ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಭಯೋತ್ಪದಾನೆ ದೊಡ್ಡ ಪಿಡುಗಾಗಿದೆ. ಭಯೋತ್ಪಾದನೆಯಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದು ಇದನ್ನು ಜಾಗತಿಕ ಸಮುದಾಯಗಳು ಸೇರಿ ತೊಡೆದು ಹಾಕಲು ಪ್ರಯತ್ನಿಸಬೇಕು ಎಂದರು.