ವಿದೇಶ

ವಿಶ್ವದ ದಡೂತಿ ಮಹಿಳೆ ಎಮನ್ ಅಹ್ಮದ್ ನಿಧನ

Manjula VN

ಅಬುಧಾಬಿ: ಮುಂಬೈ ಆಸ್ಪತ್ರೆಯಲ್ಲಿ ತೂಕ ಕಳೆದುಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಿಶ್ವದ ದಡೂತಿ ಮಹಿಳೆ ಎಮನ್ ಅಹ್ಮದ್ ಅವರು ನಿಧನ ಹೊಂದಿದ್ದಾರೆಂದು ಸೋಮವಾರ ತಿಳಿದುಬಂದಿದೆ. 

ಎಮನ್ ಅಹ್ಮದ್ ನಿಧನ ಕುರಿತಂತೆ ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದು, ಹೃದ್ರೋಗ ಹಾಗೂ ಕಿಡ್ನಿಗಳ ವೈಫಲ್ಯವೇ ಸಾವಿಗೆ ಕಾರಣ ಎಂದು ಮಾಹಿತಿ ನೀಡಿದ್ದಾರೆ.
 
ಮುಂಬೈನಿಂದ ಅಬುಧಾಬಿಗೆ ಆಗಮಿಸಿದ ಬಳಿಕ ಎಮನ್ ಅವರ ಆರೋಗ್ಯದ ಮೇಲೆ 20 ವೈದ್ಯರ ತಂಡ ನಿಗಾ ಇರಿಸಿತ್ತು ಎಂದು ಆಸ್ಪತ್ರೆ ಮಾಹಿತಿ ನೀಡಿದೆ. 

ಈಜಿಪ್ಟ್ ನ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿರುವ ಎಮನ್ ಅವರು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮುಂಬೈಗೆ ಕರೆತರಲಾಗಿತ್ತು. ಚಿಕಿತ್ಸೆ ಬಳಿಕ ಎಮನ್ ಕುಟುಂಬಸ್ಥರು ಭಾರತೀಯ ವೈದ್ಯರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದರು. ಬಳಿಕ ಮೇ.4 ರಂದು ಮತ್ತೆ ಅಬುಧಾಬಿಗೆ ಎಮನ್'ಳನ್ನು ವಾಪಸ್ ಕರೆದೊಯ್ಯಲಾಗಿತ್ತು. 

ಎಮನ್'ಳನ್ನು ಶಿಫ್ಟ್ ಮಾಡುವ ವೇಳೆಯೂ ಭಾರತೀಯ ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು. ಇದು ಅಪಾಯದ ಸಂಕೇತ ಎಂತಲೂ ಹೇಳಿದ್ದರು. ವೈದ್ಯರ ಎಚ್ಚರಿಕೆಯ ನಡುವೆಯೂ ಎಮನ್ ಳನ್ನು ಅಬುಧಾಬಿಗೆ ವಾಪಸ್ ಕರೆದೊಯ್ಯಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಎಮನ್ ತನ್ನ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. 
SCROLL FOR NEXT