ನವದೆಹಲಿ: ಕೇಂಬ್ರಿಡ್ಜ್ ಅನಾಲಿಟಿಕಾ ಅಂಕಿಅಂಶ ಬಳಕೆ ಕುರಿತು ಬಳಕೆದಾರರಿಗೆ ಫೇಸ್ ಬುಕ್ ಮಾಹಿತಿ ನೀಡಲಿದೆ. ಇಂದಿನಿಂದ ಸುಮಾರು 87 ದಶಲಕ್ಷ ಫೇಸ್ ಬುಕ್ ಬಳಕೆದಾರರಿಗೆ ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಅಂಕಿಅಂಶ ಹಂಚಿಕೆ ಮಾಡಿದವರ ವಿಸ್ತ್ರೃತ ಸಂದೇಶಗಳು ಅವರ ನ್ಯೂಸ್ ಫೀಡ್ ನಲ್ಲಿ ದೊರಕಲಿದೆ.
70 ಲಕ್ಷಕ್ಕೂ ಅಧಿಕ ಕೇಂಬ್ರಿಡ್ಜ್ ಅನಾಲಿಟಿಕಾ ಮೂಲಕ ದತ್ತಾಂಶ ಸೋರಿಕೆಯಾದ ಬಳಕೆದಾರರಲ್ಲಿ ಬಹುತೇಕರು ಅಮೆರಿಕಾದವರಾಗಿದ್ದಾರೆ. ನಂತರ ದಶಲಕ್ಷಕ್ಕೂ ಅಧಿಕ ಮಂದಿ ಫಿಲಿಫೈನ್ಸ್, ಇಂಡೋನೇಷಿಯಾ ಮತ್ತು ಇಂಗ್ಲೆಂಡಿನವರಾಗಿದ್ದಾರೆ.
ಇದಕ್ಕೆ ಹೊರತಾಗಿ, ಎಲ್ಲಾ 2.2 ಶತಕೋಟಿ ಫೇಸ್ ಬುಕ್ ಬಳಕೆದಾರರಿಗೆ ಮಾಹಿತಿ ಬರಲಿದ್ದು, ಅದರಲ್ಲಿ ನಿಮ್ಮ ಮಾಹಿತಿಗಳನ್ನು ಕಾಪಾಡಿಕೊಳ್ಳಿ ಎಂಬ ಎಚ್ಚರಿಕೆಯೊಂದಿಗೆ ಯಾವ ಆಪ್ ಬಳಕೆ ಮಾಡುತ್ತಾರೆ ಮತ್ತು ಆ ಆಪ್ ನಲ್ಲಿ ಯಾವ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಗ್ರಾಹಕರು ಬಯಸಿದರೆ ಆಪ್ ಗಳನ್ನು ವೈಯಕ್ತಿಕವಾಗಿ ಮುಚ್ಚಬಹುದು ಅಥವಾ ಮೂರನೇ ವ್ಯಕ್ತಿಗೆ ಸಿಗುವುದನ್ನು ತಮ್ಮ ಆಪ್ ಗೆ ಮುಚ್ಚಬಹುದು.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬಳಸಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದರು ಎಂಬ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ತಿಂಗಳು ಸುದ್ದಿ ಮಾಡಿ ಫೇಸ್ ಬುಕ್ ಬಳಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾಗಿತ್ತು. ಆ ಬಳಿಕ ಫೇಸ್ ಬುಕ್ ತೊಂದರೆಯನ್ನು ಹತೋಟಿಯಲ್ಲಿಡುವ ಪ್ರಯತ್ನ ಸಾಕಷ್ಟು ಮಾಡುತ್ತಿದೆ.