ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕಾ): ಬಳಕೆದಾರರ ಮಾಹಿತಿಯನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪ ಎದುರಿಸುತ್ತಿರುವ ಫೇಸ್ ಬುಕ್ ತಾನು ಸಾಮಾಜಿಕ ತಾಣ ಬಳಸುವ ಜನರ ಮಾಹಿತಿಯನ್ನು ಸಂಗ್ರಹಿಸಿರುವುದು ನಿಜ ಎಂದು ಒಪ್ಪಿಕೊಂಡಿದೆ.
ಸಾಮಾಜಿಕ ತಾಣದ ಬಳಕೆಯಿಂದ ಆಚೆಗೆ ಸಹ ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ.ಕಳೆದ ವಾರ ಅಮೆರಿಕಾ ಕಾಂಗ್ರೆಸ್ ನ ಮುಂದೆ ನಡೆದ ವಿಚಾರಣೆ ಸಮಯದಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಹೇಳಿದಂತೆ ಫೇಸ್ ಬುಕ್ ಬಳಕೆದಾರರು ಯಾವ ಮಾಹಿತಿಯನ್ನು ತಮ್ಮ ಪ್ರೊಫೈಲ್ ಗಳಲ್ಲಿ ಹಂಚಿಕೊಳ್ಳುವರೋ ಅದರ ಆಚೆ ಸಹ ಸಂಸ್ಥೆಯು ಜನರ ಮಾಹಿತಿ ಸಂಗ್ರಹಣೆ ನಡೆಸುತ್ತದೆ.
"ನಮ್ಮ ವೆಬ್ ಸೈಟ್ ಅಥವಾ ಅಪ್ಲಿಕೇಷನ್ ಅನ್ನು ನೀವು ಬಳಕೆ ಮಾಡಿದಾಗ, ನೀವು ಲಾಗ್ ಔಟ್ ಆದಮೇಲೆ ಅಥವಾ ನೀವು ಫೇಸ್ ಬುಕ್ ಖಾತೆ ಹೊಂದಿಲ್ಲದೆ ಹೋದರೂ ನಾವು ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಸಾಮಾಜಿಕ ತಾಣ ಪ್ರಾಡಕ್ಟ್ ನಿರ್ವಹಣಾ ನಿರ್ದೇಶಕ ಡೇವಿಡ್ ಬೇಸರ್ ಫೇಸ್ ಬುಕ್ ಬ್ಲಾಗ್ ನಲ್ಲಿ ಮಾಡಿದ್ದ ಪೋಸ್ಟ್ ನಲ್ಲಿ ಬರೆದಿದ್ದಾರೆ.
"ಇತರೆ ಅಪ್ಲಿಕೇಷನ್ ಹಾಗೂ ವೆಬ್ ಸೈಟ್ ಗಳಿಗೆ ಫೇಸ್ ಬುಕ್ ಬಳಕೆದಾರರ ಬಗೆಗೆ ತಿಳಿಯಬಾರದ ಕಾರಣ ನಾವು ಮಾಹಿತಿ ಸಂಗ್ರಹಿಸುತ್ತೇವೆ. " ಅವರು ಹೇಳಿದ್ದಾರೆ.ವಿಚಾರಣೆಯ ವೇಳೆ ಕಾಂಗ್ರೆಸ್ ನ ಕೆಲವು ಪ್ರಶ್ನೆಗಳಿಗೆ ಜುಕರ್‌ಬರ್ಗ್ ಉತ್ತರಿಸಲಾಗದೆ ಹೋದರು.
ಸಾಮಾಜಿಕ ತಾಣದ ಲೈಕ್ ಹಾಗೂ ಶೇರ್ ಬಟನ್ ಗಳು ಸೇರಿ ಜಾಹೀರಾತಿಗಾಗಿ ಅನೇಕ ವೆಬ್ ತಾಣಗಳು ಮತ್ತು ಅಪ್ಲಿಕೇಷನ್ ಗಳು ಫೇಸ್ ಬುಕ್ ಸೇವೆಯನ್ನು ಬಳಸಿಕೊಳ್ಳುತ್ತವೆ ಎಂದಿರುವ ಬೇಸರ್ ಹೀಗೆ ಜನರು ಬೇರೆ ವೆಬ್ ತಾಣಗಲನ್ನು ಪ್ರವೇಶಿಸಲು ಫೇಸ್ ಬುಕ್ ಖಾತೆಯನ್ನು ಬಳಸಿದಾಗಲೂ ನಾವು ಅವರ ಮಾಹಿತಿ ಪಡೆಯುತ್ತೇವೆ ಎಂದಿದ್ದಾರೆ.
ಆದರೆ ಈ ರೀತಿಯಾಗಿ ಮಾಹಿತಿ ಸಂಗ್ರಹಿಸುವ ಅಭ್ಯಾಸ ವ್ಯಾಪಕವಾಗಿದೆ.ಗೂಗಲ್ ಮತ್ತು ಟ್ವಿಟ್ಟರ್ ಸಹ ಇದೇ ರೀತಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
"ಫೇಸ್ ಬುಕ್ ಈ ಮಾಹಿತಿ ಬಳಸಿಕೊಳ್ಳುವ ಮೂರು ಪ್ರಮುಖ ಮಾರ್ಗಗಳಿದೆ- ನಾವು ಇತರೆ ವೆಬ್ ಸೈಟ್ ಅಥವಾ ಅಪ್ಲಿಕೇಷನ್ ಗಳಿಂದ ಮಾಹಿತಿ ಪಡೆಯುತ್ತೇವೆ. ಆ ಸೈಟ್ ಅಥವಾ ಅಪ್ಲಿಕೇಷನ್ ಗಳು ನಮ್ಮ ಸೇವೆಯನ್ನು ಬಳಸಿಕೊಳ್ಳುತ್ತವೆ.ಫೇಸ್ ಬುಕ್ ಸುರಕ್ಷತೆ , ಭದ್ರತೆಯನ್ನು ಸುಧಾರಿಸುವ ಸಲುವಾಗಿ ಹಾಗೆಯೇ ನಮ್ಮ ಸೇವೆಯ ಪ್ರಚಾರ ನಡೆಸಲು ಇದು ನೆರವಾಗಲಿದೆ."
"ಆದರೆ ನಾನು ಸ್ಪಷ್ಟವಾಗಿ ಹೇಳಬಲ್ಲ, ನಾವು ಜನರಿಂದ ಸಂಗ್ರಹಿಸಿದ ಮಾಹಿತಿಯನ್ನು ಮಾರಾಟ ಮಾಡುವುದಿಲ್ಲ."
2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಾಗಿ ರಾಜಕೀಯ ಪ್ರಭಾವ ಬೀರುವುದಕ್ಕೆ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯು 87 ದಶಲಕ್ಷ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡಿತ್ತು. ಈ ರೀತಿ ಅಕ್ರಮ ಮಾಹಿತಿ ಸೋರಿಕೆ ತಡೆಯುವಲ್ಲಿ ಫೇಸ್ ಬುಕ್ ವಿಫಲವಾಗಿತ್ತು ಎಂದು ಮಾರ್ಕ್ ಜುಕರ್‌ಬರ್ಗ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು.