ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್ನ ಆರು ಚುನಾವಣೆಗಳಲ್ಲಿ ಭಾರತ ಗೆಲುವು ಸಾಧಿಸಿದ್ದು ಆ ಪೈಕಿ ಐದರಲ್ಲಿ ಸರ್ವಾನುಮತದಿಂದ ಗೆಲುವು ಸಾಧಿಸಿದೆ.
ಇತ್ತೀಚಿನ ದಿನಗಳಲ್ಲಿ ಇದು ಭಾರತದ ಪಾಲಿನ ಅತಿ ಮುಖ್ಯ ಗೆಲುವು ಎಂದು ಹೇಳಬಹುದು. ಇನ್ನು ಈ ಗೆಲುವಿನ ಮೂಲಕ ಭಾರತ ವಿಶ್ವಸಂಸ್ಥೆಯ ನಾಲ್ಕು ಕಾರ್ಯನಿರ್ವಾಹಕ ಮಂಡಳಿ ಹಾಗೂ ಮೂರು ಆಯೋಗಗಳು ಮತ್ತು ಸಮಿತಿಯಲ್ಲಿ ಸ್ಥಾನ ಪಡೆಯಲಿದೆ.
ಏಷ್ಯಾ-ಪೆಸಿಫಿಕ್ ಗುಂಪಿನೊಳಗೆ ಭಾರತವು ಕೇವಲ ಸರ್ಕಾರೇತರ ಸಂಸ್ಥೆಗಳ(ಎನ್ಜಿಒ) ಸಮಿತಿಗೆ ಮಾತ್ರ ಚುನಾವಣೆ ಎದುರಿಸಿದ್ದು ಅದರಲ್ಲಿ ಅತ್ಯಧಿಕ 46 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದೆ. ಇನ್ನು ಪಾಕಿಸ್ತಾನ 43 ಮತ್ತು ಚೀನಾ 39 ಮತಗಳನ್ನು ಪಡೆದಿದೆ.
ವಿಶ್ವಸಂಸ್ಥೆ 193 ಸದಸ್ಯರನ್ನು ಒಳಗೊಂಡಿದೆ. ಆರು ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಯುನೈಟೆಡ್ ನೇಷನ್ಸ್ನ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್ಗೆ ಪ್ರವೇಶಿಸಿದೆ.
2019 ಜನವರಿಯಿಂದ ಸಮಿತಿ ಆರಂಭಗೊಳ್ಳಲಿದ್ದು ಭಾರತ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲಿದೆ. ಯುಎನ್ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ), ವಿಶ್ವಸಂಸ್ಥೆ ಪಾಪ್ಯುಲೇಶನ್ ಫಂಡ್ (ಯುಎನ್ಎಫ್ಪಿಎ) ಮತ್ತು ವಿಶ್ವಸಂಸ್ಥೆ ಆಫೀಸ್ ಫಾರ್ ಪ್ರಾಜೆಕ್ಟ್ ಸರ್ವಿಸಸ್ (ಯುಎನ್ಒಪಿಎಸ್) ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics