ಬೀಜಿಂಗ್: ಕಳುವಾದ ವಿದೇಶಿ ಪ್ರಾಚೀನ ವಸ್ತುಗಳು ತನ್ನ ದೇಶ ಪ್ರವೇಶಿಸುವುದನ್ನು ನಿಷೇಧಿಸುವುದಕ್ಕಾಗಿ ಚೀನಾ ಕ್ರಮ ಕೈಗೊಂಡಿದ್ದು, ಇದಕ್ಕಾಗಿಯೇ ಪ್ರತ್ಯೇಕ ಡಾಟಾಬೇಸ್ ನ್ನು ಪ್ರಾರಂಭಿಸಿದೆ.
ಸಾಂಸ್ಕೃತಿಕ ಪರಂಪರೆಗಾಗಿ ಇರುವ ಸರ್ಕಾರಿ ಆಡಳಿತ ವಿಭಾಗ ಪ್ರತ್ಯೇಕ ಡಾಟಾಬೇಸ್ ನ್ನು ಪ್ರಾರಂಭಿಸಿದ್ದು, ಕಳ್ಳತನವಾಗಿರುವ ವಿದೇಶಿ ಪ್ರಾಚೀನ ವಸ್ತುಗಳ ಮಾರಾಟದ ಮೇಲೆ ನಿಗಾ ಇಡಲಿದೆ. ಸಾಂಸ್ಕೃತಿಕ ಪರಂಪರೆಗೆ ಹಾನಿಯುಂಟಾಗುತ್ತಿರುವುದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸವಾಲಿನ ಸಂಗತಿಯಾಗಿದೆ ಆದ್ದರಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಚೀನಾ ಹೇಳಿದೆ.