ಸಾಂದರ್ಭಿಕ ಚಿತ್ರ 
ವಿದೇಶ

ಎನ್ಆರ್‏ಸಿ ವರದಿಗೂ, ಬಾಂಗ್ಲಾ ವಲಸಿಗರಿಗೂ ಸಂಬಂಧವಿಲ್ಲ: ಬಾಂಗ್ಲಾದೇಶ ಸ್ಪಷ್ಟನೆ

ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‏ಸಿ) ಕುರಿತಂತೆ ದೇಶಾದ್ಯಂತ ಬಾರೀ ಚರ್ಚೆಗಳಾಗುತ್ತಿರುವಾಗಲೇ ನೆರೆ ರಾಷ್ಟ್ರ ಬಾಂಗ್ಲಾದೇಶ ಈ ಸಂಬಂಧ ಪ್ರತಿಕ್ರಿಯೆ ನಿಡಿದೆ.

ಢಾಕಾ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‏ಸಿ) ಕುರಿತಂತೆ ದೇಶಾದ್ಯಂತ ಬಾರೀ ಚರ್ಚೆಗಳಾಗುತ್ತಿರುವಾಗಲೇ ನೆರೆ ರಾಷ್ಟ್ರ ಬಾಂಗ್ಲಾದೇಶ ಈ ಸಂಬಂಧ ಪ್ರತಿಕ್ರಿಯೆ ನಿಡಿದೆ. ಅಕ್ರಮ ವಲಸಿಗರ ಸಮಸ್ಯೆಒಂದಿಗೆ ಈ ಪೌರತ್ವ ನೊಂದಣಿ ವರದಿಯನ್ನು ತಳುಕು ಹಾಕುವುದು ಸರಿಯಲ್ಲ ಎಂದಿದೆ.
ಢಾಕಾದಿಂದ ಎ ಎನ್ ಐ ಸುದ್ದಿಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಾಂಗ್ಲಾದೇಶ  ಮಾಹಿತಿ ಮತ್ತು ಪ್ರಸಾರ ಸಚಿವ ಹಸನುಲ್ ಹಕ್ ಇನು "ಅಸ್ಸಾಂನ ರಾಜ್ಯದಲ್ಲಿ ಶತಮಾನದಷ್ಟು ಹಳೆಯ ಜನಾಂಗೀಯ ಸಂಘರ್ಷ ಇರುವುದು ಎಲ್ಲರಿಗೆ ತಿಳಿದ ವಿಚಾರವಾಗಿದೆ.ಳೆದ 48 ವರ್ಷಗಳಲ್ಲಿ ಯಾವುದೇ ಭಾರತೀಯ ಸರ್ಕಾರವು ಸಹ ಬಾಂಗ್ಲಾದೇಶದೊಡನೆ ಈ ಅಕ್ರಮ ವಲಸಿಗರ ಕುರಿತ ಸಮಸ್ಯೆಯನ್ನು ಮುನ್ನೆಲೆಗೆ ತಂದಿಲ್ಲ. ದೆಹಲಿಯ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ನ್ಯಾಯೋಚಿತವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.ಹೀಗಾಗಿ ಇದಕ್ಕೂ ಬಾಂಗ್ಲಾದೇಶಕ್ಕೂ ಯಾವ ಸಂಬಂಧವಿಲ್ಲ" ಎಂದಿದ್ದಾರೆ.
ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಹಿಂದಕೆ ಕರೆಸಿಕೊಳ್ಳುವಿರೆ ಎಂದು ಕೇಳಿದಾಗ ಇನು "ಭಾರತ ಇದುವರೆಗೆ ನಮ್ಮೊಂದಿಗೆ ಎನ್ಆರ್‏ಸಿ ವರದಿಯನ್ನು ಹಂಚಿಕೊಂಡಿಲ್ಲ. ಹಗೆಯೇ ಸಮಸ್ಯೆಯನ್ನು ಕುರಿತು ಚರ್ಚಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹಾಗೆ ಚರ್ಚೆಗೆ ಆಹ್ವಾನಿಸುವವರೆಗೆ ನಾನು ಅದರ ಕುರಿತು ಮಾತನಾಡಲಾರೆ " ಎಂದಿದ್ದಾರೆ.
ಬಂಗಾಳಿ ಮಾತನಾಡುವ ಪ್ರತಿಯೊಬ್ಬರೂ ಬಾಂಗ್ಲಾದೇಶದೊಂದಿಗೆ ಸಂಪರ್ಕಿಸಬಾರದು ಎಂದು ಅವರು ಹೇಳಿದ್ದಾರೆ.
ಅಸ್ಸಾಂನ ಎನ್ಆರ್‏ಸಿ ಅಂತಿಮ ಕರಡು ಸೋಮವಾರ ಪ್ರಕಟವಾದಂದಿನಿಂದ ರಾಜಕೀಯ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಕರಡಿನಲ್ಲಿ 3.29 ಕೋಟಿ ಅರ್ಜಿದಾರರಲ್ಲಿ ಸುಮಾರು 2.89 ಕೋಟಿ ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಒಟ್ಟು 40 ಲಕ್ಷಕ್ಕಿಂತ ಹೆಚ್ಚು ಜನರ ಹೆಸರು ಪ್ಟ್ಟಿಯಲ್ಲಿಲ್ಲದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ