ವಿದೇಶ

72 ನೇ ಸ್ವಾತಂತ್ರ ದಿನ: ಭಾರತದಿಂದ ನೇಪಾಳಕ್ಕೆ ವಿಶೇಷ ಗಿಫ್ಟ್!

Raghavendra Adiga
ಕಠ್ಮಂಡು(ನೇಪಾಳ) ಭಾರತ ಇಂದು 72 ನೇ ಸ್ವಾತಂತ್ರ ದಿನದ ಸಂಭ್ರಮದಲ್ಲಿದೆ. ಇದೇ ಕಾರಣಕ್ಕೆ ಬಾರತ ನೆರೆರಾಷ್ಟ್ರ ನೇಪಾಳಕ್ಕೆ ಸ್ಪೆಷಲ್ ಗಿಫ್ಟ್ ನೀಡಿದೆ.
ನೇಪಾಳದ ಭಾರತೀಯ ರಾಯಭಾರ ಕಚೇರಿ ಬುಧವಾರ 30 ಅಂಬ್ಯುಲೆನ್ಸ್ ಹಾಗು ಆರು ಬಸ್ಸುಗಳನ್ನು ನೇಪಾಳದ ವಿವಿಧ ಆಸ್ಪತ್ರೆ, ಲಾಭರಹಿತ ದತ್ತಿ ಸಂಸ್ಥೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ನಿಡಿದೆ. ದೇಶದ 72 ನೇ ಸ್ವಾತಂತ್ರ್ಯ ದಿನಾಚರಣೆ ಕೊಡುಗೆಯಾಗಿ ಇದನ್ನು ನಿಡಲಾಗಿದೆ.
ನೇಪಾಳದ ಭಾರತೀಯ ರಾಯಭಾರಿ ಮಂಜೀವ್ ಸಿಂಗ್ ಪುರಿ ಆಂಬ್ಯುಲೆನ್ಸ್ ಮತ್ತು ಶಾಲಾ ಬಸ್ಗಳನ್ನು ಭಾರತೀಯ ರಾಯಭಾರ ಕಚೇರಿಯಲ್ಲಿ ಆಯಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿದಾರೆ.. 
ಇದರೊಡನೆ ನೇಪಾಳದಲ್ಲಿರುವ ಭಾರತೀಯ ಮಿಷನ್ ನೇಪಾಳದ 68 ಗ್ರಂಥಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ 17 ಲಕ್ಷ ನೇಪಾಳೀ ರುಪೀ ಮೌಲ್ಯದ ಪುಸ್ತಕಗಳನ್ನು ಸಹ ಕೊಡುಗೆಯಾಗಿ ನೀಡಿದೆ.
ಭಾರತವು ಹಿಮಾಲಯ ರಾಷ್ಟ್ರವಾದ ನೇಪಾಳಕ್ಕೆ ಇದುವರೆಗೆ ಸುಮಾರು 7 ನೂರು ಆಂಬ್ಯುಲೆನ್ಸ್ ಮತ್ತು ಸುಮಾರು  130 ಶಾಲಾ ಬಸ್ಸುಗಳನ್ನು ಕೊಡುಗೆಯಾಗಿ ನಿಡಿದೆ.
ಕಾರ್ಯಕ್ರಮದಲ್ಲಿ ರಾಯಭಾರಿ ಪುರಿ ಅವರು ಏಳು ವಿಧವೆಯರು, ಮೃತ ಸೈನಿಕರ ಮೂವರು ಬಂಧುಗಳು, ಓರ್ವ ವೀರ ನಾರಿ, ಭಾರತೀಯ ಸಶಸ್ತ್ರ ಪಡೆಗಳ ಓರ್ವ ಅಂಗವಿಕಲ ಮಾಜಿ ಸೈನಿಕನನ್ನು ಸನ್ಮಾನಿಸಿದ್ದಾರೆ.
SCROLL FOR NEXT