ಸಂಗ್ರಹ ಚಿತ್ರ 
ವಿದೇಶ

ಪಾಕ್ ಪ್ರಧಾನಿಯಾಗಿ ಪ್ರಮಾಣ ವಚನ: 2ನೇ ಇನ್ನಿಂಗ್ಸ್ ಆರಂಭಿಸಲಿರುವ ಇಮ್ರಾನ್ ಖಾನ್

ಶನಿವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ತಮ್ಮ ರಾಜಕೀಯ ಜೀವನದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಇಸ್ಲಾಮಾಬಾದ್: ಶನಿವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ತಮ್ಮ ರಾಜಕೀಯ ಜೀವನದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್‌ ಪಕ್ಷದ ಮುಖ್ಯಸ್ಥರೂ ಕೂಡ ಆಗಿರುವ ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶುಕ್ರವಾರ ಆಯ್ಕೆಯಾಗಿದ್ದು, ದೇಶದ 22ನೇ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.  ಇನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಪ್ರಮುಖವಾಗಿ ಸರಳ ಪ್ರಮಾಣ ವಚನ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆಯಾದರೂ ಕಾರ್ಯಕ್ರಮಕ್ಕೆ ದೇಶ ವಿದೇಶ ಗಣ್ಯರನ್ನು ಆಹ್ವಾನಿಸಿರುವುದರಿಂದ ಅವರ ಆತಿಥ್ಯ ಕೂಡ ಪ್ರಮುಖವಾಗಿದೆ. ಹೀಗಾಗಿ ಪಾಕ್ ರಾಜಧಾನಿಯಲ್ಲಿ ಅಭೂತ ಪೂರ್ವ ಭದ್ರತೆ ಒದಗಿಸಲಾಗಿದೆ. 
ಸಿಧು ಭಾಗಿ
ತಾವು ಇಮ್ರಾನ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವುದಾಗಿ ಪಂಜಾಬ್‌ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ತಿಳಿಸಿದ್ದರು. ಕಾಶ್ಮೀರ ಶಾಲನ್ನು ಅವರು ಉಡುಗೊರೆಯಾಗಿ ಇಮ್ರಾನ್ ಖಾನ್ ಅವರಿಗೆ ನೀಡಲಿದ್ದಾರೆ. ಈಗಾಗಲೇ ಸಿಧು ಪಾಕಿಸ್ತಾನಕ್ಕೆ ತೆರಳಿದ್ದು, ಇಂದು ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ಅಭ್ಯರ್ಥಿ ಆಯ್ಕೆ
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶುಕ್ರವಾರ ನಡೆದ ಪ್ರಧಾನಿ ಆಯ್ಕೆ ಮತದಾನದಲ್ಲಿ ಇಮ್ರಾನ್‌ ಖಾನ್‌ ಅವರು 176 ಮತ ಪಡೆದರೆ, ಅವರ ಎದುರಾಳಿಯಾಗಿ ನಾಮಪತ್ರ ಸಲ್ಲಿಸಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಷ್‌ ಷರೀಫ್‌ಪಕ್ಷದ ಹಿರಿಯ ರಾಜಕಾರಣಿ ಶಹಬಾಜ್‌ ಷರೀಫ್‌ 96 ಮತ ಪಡೆದರು. 54 ಸದಸ್ಯರನ್ನು ಹೊಂದಿರುವ ಬಿಲಾವಲ್‌ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಮತದಾನದಿಂದ ದೂರ ಉಳಿಯಿತು. ಷರೀಫ್‌ ಪರವಾಗಿ ಪಿಪಿಪಿ ಬೆಂಬಲ ಪಡೆಯಲು ನಡೆಸಿದ ಕೊನೆಯ ಪ್ರಯತ್ನವೂ ಕೈಗೂಡಲಿಲ್ಲ. ಪಿಎಂಎಲ್‌-ಎನ್‌ ಹಿರಿಯ ನಾಯಕ ಅಯಾಜ್‌ ಸಾದಿಕ್‌ ಅವರು ಭುಟ್ಟೋ ಆಸನದ ಬಳಿ ತೆರಳಿ, ಮತದಾನದಿಂದ ದೂರ ಉಳಿಯದಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಭುಟ್ಟೋ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದೇ ವೇಳೆ, ಇಮ್ರಾನ್‌ ಖಾನ್‌ ಅವರಿಗೆ ಮುತ್ತಾಹಿದ್‌ ಕ್ವಾಮಿ ಮೊವ್‌ಮೆಂಟ್‌(7), ಬುಲೂಚಿಸ್ತಾನ ಅವಾಮಿ ಪಾರ್ಟಿ(5), ಬಲೂಚಿಸ್ತಾನ ನ್ಯಾಷನಲ್‌ ಪಾರ್ಟಿ(4), ಪಾಕಿಸ್ತಾನ ಮುಸ್ಲಿಮ್‌ ಲೀಗ್‌(3), ಗ್ರ್ಯಾಂಡ್‌ ಡೆಮಾಕ್ರಟಿಕ್‌ ಅಲೈನ್ಸ್‌(3) ಸೇರಿ ಸಣ್ಣ ಪಕ್ಷ ಗಳ ಬೆಂಬಲ ದೊರೆಯಿತು.
ಜುಲೈ 25ರಂದು ನಡೆದ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಅವರ ಪಕ್ಷ 116 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷ ವಾಗಿ ಹೊರಹೊಮ್ಮಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT