ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನ: ಉನ್ನತ ಅಧಿಕಾರಿಗಳಿಗೆ ಪ್ರಥಮ ದರ್ಜೆ ವಿಮಾನಯಾನಕ್ಕೆ ಇಮ್ರಾನ್ ಸರ್ಕಾರ ಕೊಕ್!

ದೇಶದ ಉನ್ನತ ಅಧಿಕಾರಿಗಳು, ಅಧ್ಯಕ್ಷರು, ಪ್ರಧಾನಿ, ಸರ್ಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನಯಾನವನ್ನು ....

ಇಸ್ಲಮಾಬಾದ್ : ದೇಶದ  ಉನ್ನತ ಅಧಿಕಾರಿಗಳು, ಅಧ್ಯಕ್ಷರು, ಪ್ರಧಾನಿ, ಸರ್ಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನ ಯಾನವನ್ನು  ನಿಷೇಧಿಸಿ ಪಾಕಿಸ್ತಾನ ಸಚಿವ ಸಂಪುಟ ಆದೇಶ ಹೊರಡಿಸಿದೆ. 
ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದಿರುವ ಎರಡನೇ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರಿ ಮುಖ್ಯಸ್ಥರ, ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ಕತ್ತರಿ ಹಾಕಲಾಗಿದೆ. 
ಮಾತ್ರವಲ್ಲದೆ ಪಾಕ್‌ ಉನ್ನತಾಧಿಕಾರಿಗಳು ಕಾರ್ಯ ವೇಳಾ ಪಟ್ಟಿಯನ್ನು ಕೂಡ ಪರಿಷ್ಕರಿಸಿದ್ದು ಹೆಚ್ಚು ಹೊತ್ತು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. 
ಇದರ ಪರಿಣಾಮವಾಗಿ ಇನ್ನು ಮುಂದೆ ಪಾಕ್‌ ಪ್ರಧಾನಿ, ವರಿಷ್ಠ ನ್ಯಾಯಮೂರ್ತಿ, ಸೆನೆಟ್‌ ಅಧ್ಯಕ್ಷರು, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಮತ್ತು ಮುಖ್ಯ ಮಂತ್ರಿಗಳು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯಲ್ಲಿ ಪ್ರಯಾಣಿಸುವಂತಿಲ್ಲ. ಮತ್ತು ಅವರು ಇನ್ನು ಮುಂದೆ ಬ್ಯುಸಿನೆಸ್‌ ಅಥವಾ ಕ್ಲಬ್‌ ಕ್ಲಾಸ್‌ ಗಳಲ್ಲಿ ಮಾತ್ರವೇ ಪ್ರಯಾಣಿಸಬೇಕಾಗುತ್ತದೆ.
ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ನೂತನ ಪಾಕ್‌ ಸರ್ಕಾರದ ಈ ನಿರ್ಧಾರಕ್ಕೆ ಕಾರಣವಾಗಿರುವ ಮುಖ್ಯ ಸಂಗತಿ ಎಂದರೆ ಪಾಕಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯ ಪ್ರಯಾಣಕ್ಕೆ ಇತರ ದರ್ಜೆಗಳಿಗಿಂತ 300 ಪಟ್ಟು ಅಧಿಕ ಶುಲ್ಕ ಇದೆ. 
ಇಮ್ರಾನ್‌ ಅವರು ಸ್ವತಃ ತಾನು ಇನ್ನು ಮುಂದೆ ವಿದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ವಿಶೇಷ ವಿಮಾನವನ್ನು ಬಳಸದೆ, ನಿತ್ಯ ಹಾರಾಟಕ್ಕೆ ಲಭ್ಯವಿರುವ ವಿಮಾನಗಳಲ್ಲಿನ ಬ್ಯುಸಿನೆಸ್‌ ಕ್ಲಾಸ್‌ ಅಥವಾ ಕ್ಲಬ್‌ ಕ್ಲಾಸ್‌ ನಲ್ಲಿ ಮಾತ್ರವೇ ಪ್ರಯಾಣಿಸುವುದಾಗಿ ಹೇಳಿದ್ದಾರೆ. 
ಜೊತೆಗೆ ಶಿಷ್ಟಾಚಾರಕ್ಕಾಗಿ ಕೇವಲ ಎರಡು ವಾಹನಗಳು ಮತ್ತು ಇಬ್ಬರು ಸರ್ವೆಂಟ್ ಗಳನ್ನು ಇಟ್ಟುಕೊಳ್ಳುವುದಾಗಿ  ಇಮ್ರಾನ್ ಖಾನೇ ಹೇಳಿದ್ದಾರೆ. 
ವಾರದ ಆರು ದಿನಗಳಲ್ಲೂ ಅಧಿಕಾರಿಗಳೂ ಬೆಳಗ್ಗೆ 8-4ರ ಬದಲಿಗೆ 9-5 ಗಂಟೆವರೆಗೆ ಕೆಲಸ ಮಾಡಬೇಕು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT