ಢಾಕಾ: ಟಿವಿ ಪತ್ರಕರ್ತೆಯನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಖಾಸಗಿ ಸುದ್ದಿ ವಾಹಿನಿಯ ವರದಿಗಾರ್ತಿಯಾಗಿದ್ದ ಸುಬರ್ನಾ ನೋಡಿ (32) ಅವರನ್ನು ಅನಾಮಿಕ ದುಷ್ಕರ್ಮಿಗಳು ಆಕೆಯ ಮನೆಯ ಹತ್ತಿರವೇ ಹತ್ಯೆ ಮಾಡಿದ್ದಾರೆ. ಪಬ್ನಾ ಜಿಲ್ಲೆಯ ರಾಧಾನಗರ್ ನ ನಿವಾಸಿಯಾಗಿದ್ದ ಸುಬರ್ನಾ 9 ವರ್ಶದ ಮಗಳೊಂದಿಗೆ ಇದ್ದರು, ಪತಿಯಿಂದ ವಿಚ್ಛೇದನ ಪಡೆಯುವ ಪ್ರಕ್ರಿಯೆಯಲ್ಲಿದ್ದರು ಎಂದು ತಿಳಿದುಬಂದಿದೆ.
ದ್ವಿಚಕ್ರವಾಹನದಲ್ಲಿ ಬಂದಿದ್ದ ಅನಾಮಿಕ ವ್ಯಕ್ತಿಗಳು ಸುಮಾರು 10:45 ರ ವೇಳೆಗೆ ಮನೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆಯೇ ಹರಿತವಾದ ಆಯುಧದಿಂದ ಇರಿದು ಪತ್ರಕರ್ತೆಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.