ಬೀಜಿಂಗ್: ರಿಯಲ್ ಎಸ್ಟೇಟ್ ಉದ್ಯಮಿ ಓರ್ವ ಮಹಿಳೆಯರ ಬೆತ್ತಲೆ ಬೆನ್ನಿನ ಮೇಲೆ ಮನೆ ನಿರ್ಮಾಣ ಯೋಜನೆಯೊಂದರ ಪ್ರಮೋಷನ್ ಮಾಡಿರುವ ವಿಲಕ್ಷಣ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಗುವಾಂಗ್ಕ್ಸಿ ಝುವಾಂಗ್ ನ ಸ್ವಾಯತ್ತ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಾಲ್ವರು ಮಹಿಳೆಯರ ಬೆತ್ತಲೆ ಬೆನ್ನಿನ ಮೇಲೆ ಅಪಾರ್ಟ್ಮೆಂಟ್ ನ ನೀಲನಕ್ಷೆಯನ್ನು ಚಿತ್ರಿಸಲಾಗಿದ್ದು, ಮಹಿಳೆಯರು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಚೀನಾದ ಟ್ವಿಟರ್ ಆವೃತ್ತಿಯಲ್ಲಿ ಹಾಗೂ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದ್ದು, ರಿಯಲ್ ಎಸ್ಟೇಟ್ ಕೇಂದ್ರವನ್ನು ಮುಚ್ಚಲಾಗಿದೆ. ಘಟನೆ ಬಗ್ಗೆ ಚೀನಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.