ವಿದೇಶ

ಬ್ರೆಕ್ಸಿಟ್ ನಂತರದ ಬ್ರಿಟನ್ ವೀಸಾ ಯೋಜನೆ ಭಾರತೀಯ ನೌಕರರು, ವಿದ್ಯಾರ್ಥಿಗಳಿಗೆ ವರದಾನ!

Srinivas Rao BV
ಬ್ರೆಕ್ಸಿಟ್ ನಂತರದಲ್ಲಿ ಬ್ರಿಟನ್ ಹೊಸ ವೀಸಾ ನೀತಿ ರೂಪಿಸುತ್ತಿದ್ದು, ವಲಸೆ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿದೆ. 
ಬ್ರಿಟನ್ ನ ಹೊಸ ವೀಸಾ ನೀತಿ ಕುರಿತು ಈಗಾಗಲೇ ವಿಶ್ಲೇಷಣೆಗಳು ನಡೆಯುತ್ತಿದ್ದು, ಹೊಸ ನೀತಿಯಲ್ಲಿ ಬ್ರಿಟನ್, ಕೇವಲ ಕೌಶಲ್ಯಕ್ಕೆ ಮಣೆ ಹಾಕಲು ನಿರ್ಧರಿಸಿದ್ದು, ವ್ಯಕ್ತಿಯ ಮೂಲ ದೇಶ ಯಾವುದೆಂಬ ಅಂಶದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವುದಿಲ್ಲ, ಇದು ಭಾರತದ ವಿದ್ಯಾರ್ಥಿಗಳಿಗೆ ಅಥವಾ ನೌಕರರಿಗೆ ವರದಾನವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ. 
ಕೌಶಲ್ಯ ಆಧಾರಿತ ವಲಸೆ ನೀತಿಯನ್ನು ಬ್ರಿಟನ್ ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿದ್ದು, ಹೌಸ್ ಆಫ್ ಕಾಮನ್ಸ್ ನಲ್ಲಿ ಈ ಸಂಬಂಧ ಬ್ರಿಟನ್ ನ ಗೃಹ ಕಾರ್ಯದರ್ಶಿ ಸಜಿದ್ ಜಾವಿದ್ ಮಂಡಿಸಿರುವ ಮಸೂದೆಯಲ್ಲಿ "ಅತ್ಯಂತ ಹೆಚ್ಚು ಕೌಶಲ್ಯ ಹೊಂದಿರುವ ವ್ಯಕ್ತಿ ವಿಶ್ವದ ಯಾವುದೇ ಮೂಲೆಯಿಂದ ಬಂದರೂ ಆತನಿಗೆ ವೀಸಾ ವಿನಾಯಿತಿ ನೀಡಲಾಗುತ್ತದೆ ಎಂಬ ಅಂಶವನ್ನು ಪ್ರಾಸ್ತಾಪಿಸಲಾಗಿದೆ. 
ಯುರೋಪಿಯನ್ ಯೂನಿಯನ್ ನಿಂದ ಬ್ರಿಟನ್ ಹೊರ ಬರುವ ಟ್ರಾನ್ಸಿಷನ್ ಅವಧಿಯ ನಂತರ,  2021 ರ ಡಿಸೆಂಬರ್ ನಿಂದ ಹೊಸ ಪ್ರಸ್ತಾವನೆಗಳು ಜಾರಿಗೆ ಬರುವ ಸಾಧ್ಯತೆ ಇದೆ.
SCROLL FOR NEXT