ವಿದೇಶ

ಫೆ.6 ಅಂತರರಾಷ್ಟ್ರೀಯ ಸ್ತ್ರೀ ಜನನಾಂಗ ಊನ ವಿರೋಧಿ ದಿನ: ವಿಶ್ವಸಂಸ್ಥೆ ಘೋಷಣೆ

Raghavendra Adiga
ಯುನೈಟೆಡ್ ನೇಷನ್ಸ್: ಮಹಿಳೆಯರ ಮೇಲೆ ನಡೆಯುವ ಕ್ರೂರ ಹಿಂಸೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಎಂದು ವಿಶ್ವಸಂಸ್ಥೆ ಹೇಳಿದೆ. ಇದಕ್ಕಾಗಿ ಫೆಬ್ರವರಿ 6ರ ದಿನವನ್ನು ಮಹಿಳೆಯರ ಜನನಾಂಗ ಊನ (ಎಫ್‌ಜಿಎಂ) ವಿರೋಧಿ ದಿನ ಎಂದು ಘೋಷಿಸಲಾಗಿದೆ.
ಮಹಿಳೆಯ ಜನನಾಂಗ ಊನ ಮಾಡುವ ವಿಚಿತ್ರ ಪದ್ದತಿ ಜಗತ್ತಿನ ಹಲವು ಭಾಗಗಳಲ್ಲಿ ಇನ್ನೂ ಜೀವಂತವಾಗಿದೆ. ಜಾಗತಿಕವಾಗಿ 20 ಕೋಟಿ ಯುವತಿಯರು ಈ ಅನಿಷ್ಟ ಪದ್ದತಿಯಿಂದ ತೊಂದರೆಗೀಡಾಗಿದ್ದಾರೆ. ಈ ಆಚರಣೆಯನ್ನು ವಿರೋಧಿಸಿ, ಇದನ್ನು ಕೊನೆಗೊಳಿಸಿ ಎಂದಿರುವ ವಿಶ್ವಸಂಸ್ಥೆ  #endFGM ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.
ಧರ್ಮ, ಸಂಪ್ರದಾಯದ ಹೆಸರಲ್ಲಿ ಹೆಣ್ಣುಮಕ್ಕಳಲ್ನ್ನು ಹದ್ದುಬಸ್ತಿನಲ್ಲಿಡಲು ಕೆಲ ಜನ ಸಮುದಾಯಗಳು ಅವಳ ಜನನಾಂಗವನ್ನು ಊನಗೊಳಿಸುವ ಮಾರಕ ಆಚರಣೆಯಲ್ಲಿ ತೊಡಗಿಕೊಂಡಿವೆ.  ಇದರಿಂದಾಗಿ ಕೆಲ ಹೆಣ್ಣುಮಕ್ಕಳ ಬದುಕೇ ಹಾನಿಗೊಳ್ಳುತ್ತದೆ. ಆಫ್ರಿಕಾ ಖಂಡದ ಹಲವು ರಾಷ್ಟ್ರಗಳಲ್ಲಿ ಹೆಚ್ಚಾಗಿರುವ ಈ ಆಚರಣೆಗೆ ಮಾನವ ಹಕ್ಕುಗಳನ್ನು ಜಾಗತಿಕವಾಗಿ ಪ್ರತಿಪಾದಿಸುವ  ಬ್ರಿಟನ್ ನಿಷೇಧ ಹೇರಿತ್ತು.
SCROLL FOR NEXT