ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮಹಮ್ಮದ್ ನಶೀದ್ ಮತ್ತು ವಿರೋಧ ಪಕ್ಷದ ನಾಯಕ ಮೊಮೂನ್ ಅಬ್ದುಲ್ ಗಯೂಮ್ ಅವರನಮ್ನು ಬಂಧನಕ್ಕೊಳಪಡಿಸುತ್ತಿರುವ ಪೊಲೀಸರು
ತಮಾಲೆ: ತೀವ್ರ ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಮಾಲ್ಡೀವ್ಸ್ ನಲ್ಲಿ 15 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಾನೂನು ಸಚಿವ ಅಜೀಮಾ ಶಕೂರ್, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿರುವ ಕುರಿತು ಅಧಿಕಾರಿಗಳು ಸೋಮವಾರ ಪ್ರಕರಣ ಹೊರಡಿಸಿದ್ದಾರೆ.
ಇದರೊಂದಿಗೆ ಹಲವು ತಿಂಗಳನಿಂದ ರಾಜಕೀಯ ಗೊಂದಲಕ್ಕೆ ಸಿಕ್ಕಿಬಿದ್ದಿದ್ದ, ಜೊತೆಗೆ ಕಳೆದೊಂದು ವಾರದಿಂದ ಶಾಸಕಾಗ ಮತ್ತು ನ್ಯಾಯಾಂಗದ ನಡುವಿನ ಬಿಕ್ಕಟ್ಟಿಗೆ ಸಾಕ್ಷಿಯಾಗಿದ್ದ ದೇಶ ಹೊಸದೊಂದು ಸಂಕಷ್ಟಕ್ಕೆ ಸಿಕ್ಕಿಬಿದ್ದಂತಾಗಿದೆ.
ಮಾಜಿ ಅಧ್ಯಕ್ಷ ಮಹಮ್ಮದ್ ನಶೀದ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ವಿವಿಧ ರಾಜಕೀಯ ಗಣ್ಯರನ್ನು ಬಿಡುಗಡೆ ಮಾಡುವಂತೆ ಕಳೆದ ವಾರ ಸುಪ್ರೀಂಕೋರ್ಟ್'ಗೆ ಆದೇಶಿಸಿತ್ತು. ಜೊತೆಗೆ ವಿಪಕ್ಷಗಳ 12 ಸಂಸದರ ಸದಸ್ಯತ್ವ ವಜಾ ಮಾಡಿದ್ದ ಸರ್ಕಾರದ ಆದೇಶವನ್ನೂ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೆ ಬಹುಮತ ಬಂದಿತ್ತು. ಸುಪ್ರೀಂಕೋರ್ಟ್'ನ ಈ ತೀರ್ಪು ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರಿಗೆ ಭಾರೀ ಮುಖ ಭಂಗ ಉಂಟು ಮಾಡಿತ್ತು. ಹೀಗಾಗಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾರೆ.
ಈ ನಡುವೆ ಸದಸ್ಯತ್ವರದ್ದಾಗಿದ್ದ ವಿರೋಧ ಪಕ್ಷದ 12 ಸಂಸದರು ಭಾನುವಾರ ತವರಿಗೆ ಮರಳುತ್ತಿರುವಾಗ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು.