ಲೀ ಕುನ್-ಹೀ 
ವಿದೇಶ

ತೆರಿಗೆ ವಂಚನೆ ಪ್ರಕರಣ: ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೇ ಶಂಕಿತ ಆರೋಪಿ ಎಂದ ಕೊರಿಯಾ ಪೋಲೀಸರು

ಸಾಮ್ ಸಂಗ್ ಸಂಸ್ಥೆಯ ಮುಖ್ಯಸ್ಥ ಲೀ ಕುನ್-ಹೇ 8.2 ಶತಕೋಟಿ (7.5 ದಶಲಕ್ಷ ಡಾಲರ್) ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದು........

ಸಿಯೋಲ್: ಸಾಮ್ ಸಂಗ್ ಸಂಸ್ಥೆಯ ಮುಖ್ಯಸ್ಥ ಲೀ ಕುನ್-ಹೇ 8.2 ಶತಕೋಟಿ (7.5 ದಶಲಕ್ಷ ಡಾಲರ್) ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದು ನೌಕರರ ಬ್ಯಾಂಕ್ ಖಾತೆಗಳನ್ನು ಅವರು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ದಕ್ಷಿಣ ಕೊರಿಯಾ ಪೋಲೀಸರು ಶಂಕಿಸಿದ್ದಾರೆ.
ದೇಶದ ದೊಡ್ಡ ಉದ್ಯಮ ಸಾಮ್ರಾಜ್ಯವಾದ ಸ್ಯಾಮ್ ಸಂಗ್ ನ ಕುಟುಂಬದ ಹಗರಣದ ಸರಣಿ ಮುಂದುವರಿದಿದೆ. ಅಧ್ಯಕ್ಷರ ಮಗ ಜೇ ವೈ. ಲೀ, ಈ ವಾರ ಜೈಲಿನಿಂದ ಬಿಡುಗಡೆ೩ಯಾಗಿದ್ದು  ಲಂಚ ಹಾಗೂ ಭ್ರಷ್ಠಾಚಾರ ಆರೋಪದಡಿ ಇವರು ಜೈಲುಪಾಲಾಗಿದ್ದರು. ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಮೇಲ್ಮನವಿ ಸಲ್ಲಿಸುವ ಮೂಲಕ 2-1/2 ವರ್ಷಗಳಿಗೆ ಇಳಿಕೆ ಮಾಡಿಕೊಳ್ಳಲಾಗಿತ್ತು.
2014ರಿಂದಲೂ ಹಿರಿಯ ಲೀ ಹೃದಯಾಘಾತದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಮಗ ಜೇ ವೈ. ಲೀ ಸಂಥೆಯ ವಾಸ್ತವಿಕ ಮುಖ್ಯಸ್ಥನಾಗಿದ್ದಾರೆ. 
"ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೇ ಮತ್ತು ಸ್ಯಾಮ್ ಸಂಗ್ ಕಾರ್ಯನಿರ್ವಾಹಕ ಅಧಿಕಾರಿಗಳು  72 ಕಾರ್ಯನಿರ್ವಾಹಕರ ಹೆಸರಿನಲ್ಲಿ 260 ಬ್ಯಾಂಕ್ ಖಾತೆಗಳಲ್ಲಿ ಹಣದ ವಹಿವಾಟು ನಡೆಸಿದ್ದಾರೆ" ಕೊರಿಯನ್ ನ್ಯಾಶನಲ್ ಪೋಲೀಸ್ ಏಜೆನ್ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಲೀ ಯವರ ಮನೆಯ ನವೀಕರಣಕ್ಕಾಗಿ ಸುಮಾರು ನಾಲ್ಕುನೂರು ಬಿಲಿಯನ್ ಹಣವನ್ನು ಖಾತೆಗಳಿಂದ ಬಳಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT