ವಿದೇಶ

ಪಾಕ್ ನಲ್ಲಿ ಮತ್ತೆ ಅಮೆರಿಕ ಡ್ರೋಣ್ ದಾಳಿ, 4 ಉಗ್ರರ ಸಾವು: ಪಾಕ್ ಮಾಧ್ಯಮಗಳ ವರದಿ

Srinivasamurthy VN
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೆ ಅಮೆರಿಕ ಸೇನೆಯ ಡ್ರೋಣ್ ವಿಮಾನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ಕು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ-ಆಪ್ಘಾನಿಸ್ತಾನದ ಗಡಿ ಭಾಗ ಉತ್ತರ ವಜಿರೀಸ್ತಾನದ ಮೇಲೆ ಅಮರಿಕ ಸೇನೆಯ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ದಾಳಿ ನಡೆಸಲಾಗಿದ್ದು, ಈ ವೇಳೆ ನಾಲ್ಕು ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನಿ  ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನಿ ಮಾಧ್ಯಮಗಳ ವರದಿಯಂತೆ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆಯ ಕಮಾಂಡರ್ ಖಾನ್ ಸೈದ್ ಸಜ್ನಾ ಸೇರಿದಂತೆ ಹಖ್ಖಾನಿ ಉಗ್ರ ಸಂಘಟನೆ ಮೂವರು ಉಗ್ರರು  ದಾಳಿಯಲ್ಲಿ ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಜನವರಿ ತಿಂಗಳಲ್ಲೂ ಅಮೆರಿಕ ಸೇನೆ ಪಾಕ್-ಆಫ್ಘನ್ ಗಡಿಯ ಹಂಗು ಜಿಲ್ಲೆಯಲ್ಲಿನ ಬುಡುಕಟ್ಟು ಪ್ರದೇಶದ ಮೂಲಭೂತವಾದಿಗಳ ಕ್ಯಾಂಪ್ ಗಳ ಮೇಲೆ ಡ್ರೋಣ್ ದಾಳಿ ನಡೆಸಿತ್ತು, ಈ ವೇಳೆ ಖೈಬರ್ ಪಕ್ತುಂಕ್ವಾದಲ್ಲಿ ಇಬ್ಬರು  ತಾಲಿಬಾನ್ ಉಗ್ರರು ಹತರಾಗಿದ್ದರು. ಈ ಡ್ರೋಣ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಅಮೆರಿಕದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಮೆರಿಕದ ನಡೆ ಪರಸ್ಪರ ಸಹಕಾರಕ್ಕೆ ಸವಾಲೊಡ್ಡಿದೆ ಎಂದು ಕಿಡಿಕಾರಿತ್ತು. ಅಲ್ಲದೆ  ಪ್ರಾದೇಶಿಕ ಹಕ್ಕು ಉಲ್ಲಂಘನೆ ಎಂದೂ ಜರಿದಿತ್ತು. ಇದಾದ ತಿಂಗಳ ಅವಧಿಯಲ್ಲಿ ಮತ್ತೆ ಅಮೆರಿಕ ಸೇನೆ ಮತ್ತೊಂದು ದಾಳಿ ನಡೆಸಿದೆ.
SCROLL FOR NEXT