ಕಠ್ಮಂಡು: ಸಿಪಿಎನ್-ಯುಎಂಎಲ್ ನ ಅಧ್ಯಕ್ಷ ಖಡ್ಗ ಪ್ರಸಾದ್ ಶರ್ಮ ಓಲಿ ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ.
ನೇಪಾಳದ ರಾಷ್ಟ್ರಪತಿ ವಿದ್ಯಾ ಭಂಡಾರಿ ಓಲಿ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಓಲಿ ಅವರ ಕಮ್ಯುನಿಸ್ಟ್ ಪಕ್ಷ ಸಂಸತ್ ನಲ್ಲಿ ಬಹುಮತ ಗಳಿಸಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಕೆಪಿ ಶರ್ಮಾ ಓಲಿ ಅವರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಶೇರ್ ಬಹಾದ್ದೂರ್ ದೇವುಬಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆ.ಪಿ ಶರ್ಮಾ ಓಲಿ ಸಿಪಿಎನ್-ಯುಎಂಎಲ್ ಹಾಗೂ ಸಿಪಿಎನ್ ಸದಸ್ಯರನ್ನೊಳಗೊಂಡ ಮಂತ್ರಿಮಂಡಲ ರಚಿಸಲಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಹಾಗೂ ಓಲಿ ಅವರ ಯುಎಂಎಲ್ ಶೀಘ್ರವೇ ವಿಲೀನವಾಗಲಿವೆ.