2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್
ಇಸ್ಲಾಮಾಬಾದ್: ಅಮೆರಿಕ ಹಾಗೂ ಭಾರತವನ್ನು ಮೆಚ್ಚಿಸುವ ಸಲುವಾಗಿ ಪಾಕಿಸ್ತಾನ ಸರ್ಕಾರ ನಮ್ಮ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗುರುವಾರ ಹೇಳಿದ್ದಾರೆ.
ಉಗ್ರ ನಿಗ್ರಹ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಫೀಜ್ ನೈತೃತ್ವದ ಉಗ್ರ ಸಂಘಟನೆಗಳಿಗೆ ಸೇರಿದ ಆಸ್ತಿಗಳನ್ನು ಮುಟ್ಟಗೋಲು ಹಾಕಲು ಪಾಕಿಸ್ತಾನ ಮುಂದಾಗಿದೆ. ಹಫೀಜ್ ನೇತೃತ್ವದ ಜಮತ್ ಉದ್ ದವಾ (ಜೆಯುಡಿ), ಫಲಾ-ಐ-ಇನ್ಸಾನಿಯತ್ ಫೌಂಡೇಷನ್ (ಎಫ್ಐಎಫ್) ಉಗ್ರ ಸಂಘಟನೆಗಳು ನಡೆಸುತ್ತಿರುವ ಶಾಲೆ, ಆಸ್ಪತ್ರೆ, ಆ್ಯಂಬುಲೆನ್ಸ್'ಗಳನ್ನು ವಶಕ್ಕೆ ಪಡೆಯುವಂತೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ದ ತೀವ್ರವಾಗಿ ಕಿಡಿಕಾರಿರುವ ಹಫೀಜ್ ಸಯೀದ್, ಯಾವುದೇ ಸಾಕ್ಷ್ಯಾಧಾರಗಳಿಲ್ಲರದಿದ್ದರೂ ಪಾಕಿಸ್ತಾನ ಸರ್ಕಾರ ನನ್ನನ್ನು 10 ತಿಂಗಳ ಕಾಲ ಬಂಧನದಲ್ಲಿರಿಸಿತ್ತು. ಇದೀಗ ನಮ್ಮ ಶಾಲೆಗಳು, ಓಷಧಾಲಯಗಳು, ಆ್ಯಂಬುಲೆನ್ಸ್ ಮತ್ತು ಇತರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ ಎಂದು ಹೇಳಿದ್ದಾನೆ.
ಸರ್ಕಾರ ಈ ನಿರ್ಧಾರ ಪಂಜಾಬ್, ಬಲೂಚಿಸ್ತಾನ, ಸಿಂಧ್, ಅಜಾದ್ ಕಾಶ್ಮೀರ ಮತ್ತು ಉತ್ತರದಲ್ಲಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ನಮ್ಮ ಪರಿಹಾರ ಕಾರ್ಯಗಳಿಗೆ ಅಡ್ಡಿಯುಂಟು ಮಾಡಿದಂತಾಗುತ್ತದೆ. ಕೇವಲ ಅಮೆರಿಕ ಹಾಗೂ ಭಾರತವನ್ನು ಮೆಚ್ಚಿಸುವ ಸಲುವಾಗಿ ಪಾಕಿಸ್ತಾನ ಸರ್ಕಾರ ಈ ರೀತಿಯ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics