ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ 
ವಿದೇಶ

ಮಾಜಿ ಕ್ರಿಕೆಟಿಗ, ರಾಜಕೀಯ ನಾಯಕ ಇಮ್ರಾನ್ ಖಾನ್ ಮತ್ತೊಮ್ಮೆ ರಹಸ್ಯ ವಿವಾಹ?

ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಮೊನ್ನೆ ಹೊಸ ವರ್ಷದ ದಿನ ಲಾಹೊರ್ ನಲ್ಲಿ ....

ಇಸ್ಲಾಮಾಬಾದ್: ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮೊನ್ನೆ ಹೊಸ ವರ್ಷದ ದಿನ ಲಾಹೊರ್ ನಲ್ಲಿ ಮತ್ತೊಮ್ಮೆ ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಡಿದೆ.
ತಾವು ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಲು ಹೋಗುತ್ತಿದ್ದ ಮಹಿಳೆಯೊಂದಿಗೆ ಮದುವೆ ಮಾಡಿಕೊಂಡಿದ್ದಾರೆ ಎಂದು ದ ನ್ಯೂಸ್ ವರದಿ ಮಾಡಿದೆ.
ಜನವರಿ 1ರಂದು ರಾತ್ರಿ ಮಹಿಳೆಯನ್ನು ಮದುವೆ ಮಾಡಿಕೊಳ್ಳುವ ಮೂಲಕ 2018ರ ಹೊಸ ವರ್ಷವನ್ನು ಇಮ್ರಾನ್ ಖಾನ್ ಲಾಹೊರ್ ನಲ್ಲಿ ಸ್ವಾಗತಿಸಿದ್ದಾರೆ ನಂತರ ಮರುದಿನ ಅಲ್ಲಿಂದಲೇ ನೇರವಾಗಿ ಇಸ್ಲಾಮಾಬಾದಿಗೆ ಭಯೋತ್ಪಾದನಾ ನಿಗ್ರಹ ಕೋರ್ಟ್ ಗೆ ಆಗಮಿಸಿದ್ದರು. ಅಲ್ಲಿ ಅವರಿಗೆ ಜಾಮೀನು ಸಿಕ್ಕಿತು ಎಂದು ನ್ಯೂಸ್ ವರದಿ ಮಾಡಿದೆ.
ಪಿಟಿಐ ಕೋರ್ ಸಮಿತಿ ಸದಸ್ಯ ಮುಫ್ತಿ ಸಯೀದ್ ನಿಖಾವನ್ನು ನೆರವೇರಿಸಿದ್ದು 2015ರ ಜನವರಿ 8ರಂದು ಇಮ್ರಾನ್ ಖಾನ್ ಸಾರ್ವಜನಿಕವಾಗಿ ರೆಹಮಾನ್ ಖಾನ್ ಅವರನ್ನು ವರಿಸಿದ್ದಾಗಲೂ ಕೂಡ ಮುಫ್ತಿ ಸಯೀದ್ ಅವರೇ ನಿಖಾ ಮಾಡಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಇಮ್ರಾನ್ ಖಾನ್ ರೆಹಮಾನ್ ಖಾನ್ ರನ್ನು 2014ರಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು ಎಂದು ವರದಿಯಾಗಿತ್ತು.
ಈ ಬಗ್ಗೆ ಮುಫ್ತಿ ಸಯೀದ್ ಅವರನ್ನು ಕೇಳಿದರೆ ಸ್ಪಷ್ಟ ಉತ್ತರ ನೀಡಲಿಲ್ಲ. ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿರುವ ಇಮ್ರಾನ್ ಖಾನ್ ರ ರಾಜಕೀಯ ಕಾರ್ಯದರ್ಶಿ ಅವನ್ ಚೌಧರಿ ಮತ್ತು ಪಿಟಿಐ ವಕ್ತಾರ ನಯೀಮ್ ಉಲ್ ಹಖ್ ಈ ಸುದ್ದಿಯನ್ನು ನಿರಾಕರಿಸುತ್ತಾರೆ.
ಇದು ಬೇಜವಬ್ದಾರಿಯ ಪೀತ ಪತ್ರಿಕೋದ್ಯಮದ ವರದಿ. ಇದು ಸಂಪೂರ್ಣ ಕಟ್ಟು ಕಥೆಯಾಗಿದ್ದು, ವಿವೇಚನರಹಿತವಾಗಿ ಹಬ್ಬಿರುವ ಗಾಳಿಸುದ್ದಿಯಷ್ಟೆ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ 35 ವರ್ಷಗಳಿಂದ ಇಮ್ರಾನ್ ಖಾನ್ ಅವರೊಂದಿಗೆ ಇದ್ದೇನೆ. ಇಂತಹ ರಹಸ್ಯ ವಿವಾಹ ನಡೆದಿಲ್ಲ. ಒಂದು ವೇಳೆ ಅವರು ಮದುವೆಯಾಗುವುದಿದ್ದರೂ ಕೂಡ ಈ ವರ್ಷದ ಪಾಕಿಸ್ತಾನದ ಚುನಾವಣೆಯ ನಂತರವಷ್ಟೆ ಎಂದು ನಯೀಮ್ ಟ್ವೀಟ್ ಮಾಡಿದ್ದಾರೆ.
ವಧುವಿನ ಆಪ್ತ ನಂಬಿಕಸ್ಥರ ಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಅವರು ಇಮ್ರಾನ್ ಖಾನ್ ಗೆ ಸ್ನೇಹಿತರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜೆನಿಮಾ ಖಾನ್ ಜೊತೆ ಮೊದಲ ಮದುವೆಯಾಗಿದ್ದ ಇಮ್ರಾನ್ ಖಾನ್ 9 ವರ್ಷಗಳ ವೈವಾಹಿಕ ಜೀವನ ನಂತರ 2004, ಜೂನ್ 22ರಂದು ವಿಚ್ಛೇದನ ಪಡೆದಿದ್ದರು. ರೆಹಮ್ ಖಾನ್ ಜೊತೆ ಆದ ವಿವಾಹ ಕೇವಲ 10 ತಿಂಗಳಲ್ಲಿ ಅಂತ್ಯಗೊಂಡಿತ್ತು. ಎರಡನೇ ವಿವಾಹವನ್ನು ಅವರು ಬಹಿರಂಗಪಡಿಸಿದ್ದು ಮಾತ್ರ 2015ರ ಜನವರಿ 8ರಂದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್‌ಗಳಿಂದ ಗೆದ್ದ ಭಾರತ U-19 ತಂಡ

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!

ChatGPT ತಂದ ಸಾವು: "ಏನಾಗಲ್ಲ, ಈ ಮಿಶ್ರಣ ಸೇವಿಸು" ಎಂದಿದ್ದ OpenAI; ಮಾತು ನಂಬಿದ 19 ವರ್ಷದ ಯುವಕ ಸಾವು; ತಾಯಿಯ ರೋಧನೆ!