ಇಸ್ಲಾಮಾಬಾದ್: ಪಾಕಿಸ್ತಾನ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕದಿದ್ದರೆ ನಿಮ್ಮ ವಿರುದ್ಧ ಕಠಿಣ ಕ್ರಮ ತೊಗೆದುಬೇಕಾಗುತ್ತದೆ ಎಂದು ಅಮೆರಿಕ ಕಟ್ಟೆಚ್ಚರ ದ ಬಳಿಕ ಎಚ್ಚೆತ ಪಾಕಿಸ್ತಾನ ಜೆಯುಡಿ ಉಗ್ರ ಸಂಘಟನೆ ಸೇರಿ 71 ಸಂಘಟನೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನಿರ್ಮಾಣದ ಜಮಾತ್-ಉದ್-ದವಾ(ಜೆಡಿಯು) ಮತ್ತು ಫಲಾಹ್ ಇ ಇನ್ಸ್ಯಾನಿಟ್ ಫೌಂಡೇಶನ್(ಎಫ್ಐಎಫ್) ಉಗ್ರ ಸಂಘಟನೆ ಸೇರಿದಂತೆ 71 ಉಗ್ರ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಪಾಕಿಸ್ತಾನ ಆಂತರಿಕ ಸಚಿವಾಲಯ ಘೋಷಿಸಿತ್ತು.
ಕಪ್ಪುಪಟ್ಟಿಗೆ ಸೇರಿಸಲಾಗಿರುವ ಉಗ್ರ ಸಂಘಟನೆಗಳಿಗೆ ಇನ್ನು ಮುಂದೆ ಆರ್ಥಿಕ ಸಹಾಯ ಒದಗಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇನ್ನು ರಹಸ್ಯವಾಗಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆಗಳ ವಿರುದ್ಧವೂ ಸರ್ಕಾರ ಕ್ರಮಕೈಗೊಳ್ಳುತ್ತದೆ.
ಫಲಾಹ್ ಇ ಇನ್ಸ್ಯಾನಿಟ್ ಫೌಂಡೇಶನ್(ಎಫ್ಐಎಫ್) ವಿರುದ್ಧ ಇಲ್ಲಿಯವರೆಗೂ ಇಸ್ಲಾಮಾಬಾದ್ ನಲ್ಲಿ ಮೂರು ಎಫ್ಐಆರ್ ಗಳು ದಾಖಲಾಗಿವೆ ಎಂದರು.
ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ಬುಡಸಹಿತ ಕಿತ್ತು ಹಾಕದಿದ್ದರೆ, ಆ ದೇಶದ ವಿರುದ್ಧ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳೂ ತಮ್ಮ ಮೇಜಿನ ಮೇಲಿವೆ ಎಂದು ವೈಟ್ ಹೌಸ್ ಹೇಳಿತ್ತು. ಅಲ್ಲದೆ ಈಗಾಗಲೇ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ 2 ಶತಕೋಟಿ ಡಾಲರ್ ಗಳ ಭದ್ರತಾ ನೆರವನ್ನು ಅಮಾನತು ಮಾಡಿತ್ತು.