ವಿದೇಶ

ಡೋಕ್ಲಾಂ ಚೀನಾದ ಪರಮಾಧಿಕಾರದ ವ್ಯಾಪ್ತಿಯಲ್ಲಿದೆ, ರಾವತ್ ಹೇಳಿಕೆಗೆ ಚೀನಾ ತಿರುಗೇಟು

Raghavendra Adiga
ಬೀಜಿಂಗ್: ಡೋಕ್ಲಾಂ ವಿಚಾರದಲ್ಲಿ ಚೀನಾ ಹತಾಶೆ ಅನುಭವಿಸಿದೆ.ಈ ಸಂಬಂಧ ಅದಕ್ಕೆ ಹಿನ್ನಡೆಯಾಗಿದೆ ಎಂದಿದ್ದ ಭಾರತ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಟೀಕೆಗೆ ಚೀನಾ ಇಂದು ನೇರ ಪ್ರತ್ಯುತ್ತರ ನೀಡಿದೆ. ನಮ್ಮ ಸೈನಿಕರು ಆವರ ಪ್ರದೇಶದಲ್ಲಿ ಸಾರ್ವಭೌಮ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಚೀನಾ ತಿಳಿಸಿದೆ
"ಡೊಕ್ಲಾಂ ಪ್ರದೇಶವು ಚೀನಾದ ಭಾಗವಾಗಿದೆ ಮತ್ತು ಚೀನಾದ ನಿರಂತರ ಮತ್ತು ಪರಿಣಾಮಕಾರಿ ಅಧಿಕಾರ ವ್ಯಾಪ್ತಿಯಲ್ಲಿದೆ. ಈ ವಿಷಯದಲ್ಲಿ ಯಾವುದೇ ವಿವಾದಗಳಿಲ್ಲ," ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಮಾಧ್ಯಮಗಳಿಗೆ ತಿಳಿಸಿದರು.
ಅರುಣಾಚಲ ಪ್ರದೇಶದ ಟ್ಯೂಟಿಂಗ್ ನಲ್ಲಿ ಭಾರತ್ದ ಗಡಿ ಭಾಗದಲ್ಲಿ ರಸ್ತೆ ನಿರ್ಮಿಸಲು ಚೀನಾ ತಂಡಗಳು ಇತ್ತೀಚೆಗೆ ನಡೆಸಿದ ಪ್ರಯತ್ನದ ಬಗ್ಗೆ ಭಾರತ ಮತ್ತು ಚೀನದ ಪಡೆಗಳು  ಸಮಸ್ಯೆಯನ್ನು ಬಗೆಹರಿಸಿಕೊಂಡಿವೆ  ಡೋಕ್ಲಾಂ ಪ್ರದೇಶದಲ್ಲಿ ಚೀನೀ ಸೇನೆಗೆ ಇದು ಪ್ರಮುಖ ಹಿನ್ನಡೆಯಾಗಿದೆ ಎಂದು ರಾವತ್ ನಿನ್ನೆ ಹೇಳಿಕೆ ನೀಡಿದ್ದರು.
ಚೀನಾ ಮತ್ತು ಭಾರತ ಸಿಕ್ಕಿಂ ಗಡಿಯ ಡೋಕ್ಲಾಂ ಬಲ್ಲಿ 73 ದಿನಗಳ ಉದ್ವಿಗ್ನ ವಾತಾವರಣವಿದ್ದು ಕಡೆಗೂ ಈ ವಿವಾದ ಆಗಸ್ಟ್ 28 ರಂದು ಶಾಂತಿಯುತ ಅಂತ್ಯಕಂಡಿತ್ತು.
SCROLL FOR NEXT