ವಿದೇಶ

ಬ್ರಿಟನ್ ಸರ್ಕಾರದಲ್ಲಿ ಇನ್ಫಿ ನಾರಾಯಣ ಮೂರ್ತಿ ಅಳಿಯನಿಗೆ ಉನ್ನತ ಹುದ್ದೆ

Lingaraj Badiger
ಲಂಡನ್: ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸೇರಿದಂತೆ ಭಾರತೀಯ ಮೂಲದ ಇಬ್ಬರು ಸಂಸದರಿಗೆ ಬ್ರಿಟನ್ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಲಾಗಿದೆ.
ಬ್ರಿಟನ್ ಪ್ರಧಾನಿ ಥೆರೆಸಾ ಮೇ ಇತ್ತಿಚೀಗೆ ತಮ್ಮ ಸಚಿವರುಗಳು ಮತ್ತು ಕಾರ್ಯದರ್ಶಿಗಳ ತಂಡವನ್ನು ಪುನಾರಚನೆ ಮಾಡಿದ್ದು, ಕನ್ನಡಿಗ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರಿಗೆ ಉನ್ನತ ಹುದ್ದೆ ಲಭ್ಯವಾಗಿರುವುದು ಹೆಮ್ಮೆಯ ವಿಚಾರ.
ಕನ್ಸರ್ವೇಟಿವ್ ಪಕ್ಷದ ಸಂಸದರಾಗಿರುವ 37 ವರ್ಷದ ಸುನಕ್ ಅವರನ್ನು ಬ್ರಿಟನ್‌ ಮಿನಿಸ್ಟ್ರಿ ಆಫ್ ಹೌಸಿಂಗ್, ಕಮ್ಯೂನಿಟಿಸ್ ಅಂಡ್ ಲೋಕಲ್ ಗವರ್ನಮೆಂಟ್ ಸೆಕ್ರೆಟರಿಯಾಗಿ ಥೆರೆಸಾ ಮೇ  ಅವರು ನೇಮಕ ಮಾಡಿದ್ದಾರೆ.
ರಿಷಿ ಸುನಕ್ ಅವರು ೨೦೧೫ರ ಚುನಾವಣೆಯಲ್ಲಿ ನಾರ್ತ್ ಯಾರ್ಕ್ ಶೈರ್‌ನ ರಿಚ್ಮಂಡ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರುವ ರಿಷಿ, ೨೦೧೪ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು.
SCROLL FOR NEXT