ಸೆಲ್ಫಿಯಿಂದ ಸಾವಷ್ಟೇ ಬರುವುದಿಲ್ಲ, ಸಾವಿನ ರಹಸ್ಯಗಳೂ ಬಯಲಾಗುತ್ತವೆ!
ಕೆನಡಾ: ಇತ್ತೀಚಿನ ಯುವಕರಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಾಗುತ್ತಿದ್ದು, ಸೆಲ್ಫಿಯಿಂದಾಗಿ ಸಾವು ಸಂಭವಿಸಿರುವ ಹಲವು ಘಟನೆಗಳೂ ನಡೆದಿದೆ. ಆದರೆ ಕೆನಡಾದಲ್ಲಿ ಸೆಲ್ಫಿಯಿಂದ ಸಾವಿನ ರಹಸ್ಯವೊಂದು ಬಯಲಾಗಿರುವ ವಿಲಕ್ಷಣ ಘಟನೆ ವರದಿಯಾಗಿದೆ.
ಕೆನಡಾದಲ್ಲಿ 2 ವರ್ಷಗಳ ಹಿಂದೆ ಬ್ರಿಟ್ನಿ ಗಾರ್ಗೋಲ್ ಎಂಬ ವ್ಯಕ್ತಿಯ ಹತ್ಯೆಯಾಗಿತ್ತು, ಮೃತ ದೇಹ ಪತ್ತೆಯಾದ ಜಾಗದಲ್ಲಿ ಬೆಲ್ಟ್ ಸಿಕ್ಕಿತ್ತು, ಹತ್ಯೆಗೂ ಕೆಲವೇ ಗಂಟೆಗಳ ಮುನ್ನ ಬ್ರಿಟ್ನಿ ಗಾರ್ಗೋಲ್ ಜೊತೆ ಇದೇ ಬೆಲ್ಟ್ ಹಾಕಿಕೊಂಡು ಅಪರಾಧಿ ಚೆಯೆನ್ನೆ ರೋಸ್ ಆಂಟೊನಿ ಸೆಲ್ಫಿ ತೆಗೆದುಕೊಂಡಿದ್ದಳು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ಆಗಿದ್ದು, ಫೋಟೋದಿಂದ ಸಿಕ್ಕ ಸುಳಿವನ್ನು ಆಧರಿಸಿ ಪೊಲೀಸರು ಹತೆಯ್ಯ ಅಪರಾಧಿಯನ್ನು ಪತ್ತೆ ಮಾಡಿದ್ದಾರೆ.
ಪ್ರಾರಂಭದಲ್ಲಿ ಬ್ರಿಟ್ನಿ ಗಾರ್ಗೋಲ್ ಹತ್ಯೆ ಪ್ರಕರಣದಲ್ಲಿ ಚೆಯೆನ್ನೆ ರೋಸ್ ಆಂಟೊನಿ ಅವರನ್ನು 2 ನೇ ಶಂಕಿತ ಆರೋಪಿಯನ್ನಾಗಿ ಪರಿಗಣಿಸಲಾಗಿತ್ತು, ಸೆಲ್ಫಿಯಲ್ಲಿದ್ದ ಬೆಲ್ಟ್ ಹಾಗೂ ಹತ್ಯೆಯಾದ ಜಾಗದಲ್ಲಿ ಸಿಕ್ಕ ಬೆಲ್ಟ್ ಒಂದೇ ಆಗಿದ್ದರಿಂದ ಹೆಚ್ಚಿನ ವಿಚಾರಣೆ ನಡೆಸಿದಾಗ ಚೆಯೆನ್ನೆ ರೋಸ್ ಆಂಟೋನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಿಯಾಗಿದ್ದ ಮತ್ತೋರ್ವರ ಬಗ್ಗೆ ಮಾಹಿತಿ ನೀಡಿ, ತಪ್ಪನ್ನು ಒಪ್ಪಿಕೊಂಡಿದ್ದಾರೆ.