ಲಾಸ್ ಏಂಜಲೀಸ್: ತಮ್ಮ ದತ್ತು ಪುತ್ರಿ ಡೈಲನ್ ಫಾರ್ರೊ ಗೆ ಎಂದಿಗೂ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಚಿತ್ರ ನಿರ್ದೇಶಕ ವುಡಿ ಅಲೆನ್ ತಿಳಿಸಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಡೈಲನ್ ಫರ್ರೊ ಇತ್ತೀಚೆಗೆ ಆರೋಪ ಮಾಡಿದ್ದಳು.
ಈ ಬಗ್ಗೆ ಸಾರ್ವಜನಿಕವಾಗಿ ಹೇಳಿದರೆ ತಾನು ಸತ್ಯ ಹೇಳುತ್ತೇನೆಂದು ಜನರಿಗೆ ಅರ್ಥವಾಗುತ್ತದೆ ಎಂದು ಹೇಳಿ ಟಿವಿಯೊಂದಕ್ಕೆ ಸಂದರ್ಶನವನ್ನು ಡೈಲನ್ ಫಾರ್ರೊ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲೆನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಹಾಲಿವುಡ್ ನ ಟೈಮ್ಸ್ ಅಪ್ ಚಳವಳಿಯನ್ನು ಸಿನಿಕತನದಿಂದ ಫರ್ರೊ ಬಳಸಿಕೊಳ್ಳುತ್ತಿದ್ದಾಳೆ ಎಂದು ವುಡಿ ಅಲ್ಲೆನ್ ಆರೋಪಿಸಿದ್ದಾರೆ.
25 ವರ್ಷಗಳ ಹಿಂದೆ ತನ್ನ ವಿರುದ್ಧ ಆರೋಪ ಮಾಡಿದ್ದಾಗ ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ ಆಸ್ಪತ್ರೆ ಮತ್ತು ನ್ಯೂಯೂರ್ಕ್ ನ ಮಕ್ಕಳ ಅಭಿವೃದ್ಧಿ ಕಚೇರಿ ಸಮಗ್ರವಾಗಿ ತನಿಖೆ ನಡೆಸಿತ್ತು. ಹಲವು ತಿಂಗಳುಗಳ ಕಾಲ ವಿಚಾರಣೆ ನಡೆಸಿ ಯಾವುದೇ ಲೈಂಗಿಕ ಕಿರುಕುಳ ನಡೆದಿಲ್ಲ ಎಂದು ಸ್ವತಂತ್ರವಾಗಿ ತೀರ್ಪು ನೀಡಿತ್ತು ಎಂದು ವುಡಿ ಹೇಳಿದ್ದಾರೆ.