ಪ್ರಧಾನಿ ನರೇಂದ್ರ ಮೋದಿ 
ವಿದೇಶ

ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ತಾರತಮ್ಯ ಅಪಾಯಕಾರಿ: ಪ್ರಧಾನಿ ನರೇಂದ್ರ ಮೋದಿ

ದಾವೋಸ್ ನಲ್ಲಿ ನಡೆಯುತ್ತಿರುವ 48 ನೇ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ...

ದಾವೋಸ್: ದಾವೋಸ್ ನಲ್ಲಿ ನಡೆಯುತ್ತಿರುವ 48 ನೇ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಶಾಂತಿ-ಸ್ಥಿರತೆ-ಭದ್ರತೆ ವಿಷಯದಲ್ಲಿ ಜಗತ್ತು ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ಜಾಗತಿಕ ಒಗ್ಗಟ್ಟು 21 ನೇ ಶತಮಾನದಲ್ಲಿ ಪ್ರಮುಖವಾದದ್ದು ಎಂದು ಹೇಳಿದ್ದಾರೆ. 
ಕಳೆದ ಬಾರಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾರತದ ಅಂದಿನ ಪ್ರಧಾನಿ ಹೆಚ್ ಡಿ ದೇವೇಗೌಡರು ಭಾಗವಹಿಸಿದ್ದಾಗ ಭಾರತದ ಜಿಡಿಪಿ 400 ಬಿಲಿಯನ್ ಡಾಲರ್ ಗಿಂತಲೂ ಕಡಿಮೆ ಇತ್ತು, ಆದರೆ ಈಗ ಭಾರತದ ಜಿಡಿಪಿ ಈಗ 6 ಪಟ್ಟು ಹೆಚ್ಚಿದೆ ಎಂದು ಮೋದಿ ಹೇಳಿದ್ದಾರೆ. 
ತಂತ್ರಜ್ಞಾನದಿಂದಾಗಿ ಇಂದಿನ ಜೀವನ ಗತಿ ಬದಲಾಗಿದೆ, ವಿಶ್ವದ ಎದುರು ಈಗ ಶಾಂತಿ ಸ್ಥಿರತೆ ಸುರಕ್ಷತೆ ಬಹುದೊಡ್ಡ ಸವಾಲುಗಳಾಗಿವೆ, ಜಾಗತಿಕ ತಾಪಮಾನ ಜಗತ್ತಿನ ಮುಂದಿರುವ ಬಹುದೊಡ್ಡ ಅಪಾಯ, ಹಾಗೆಯೇ ಎಲ್ಲಾ ರಾಷ್ಟ್ರಗಳು ಆತ್ಮಕೇಂದ್ರಿತವಾಗುತ್ತಿರುವುದು ಮತ್ತೊಂದು ದೊಡ್ಡ ಅಪಾಯ, ಜಾಗತಿಕ ತಾಪಮಾನ, ಭಯೋತ್ಪಾದನೆ ಅಪಾಯಗಳನ್ನು ತಡೆಗಟ್ಟಲು 21 ನೇ ಶತಮಾನದಲ್ಲಿ ಜಾಗತಿಕ ಒಗ್ಗಟ್ಟು ಪ್ರಮುಖವಾದದ್ದು, ಎಂದು ಹೇಳಿರುವ ಪ್ರಧಾನಿ ವಸುದೈವ ಕುಟುಂಬಕಂ ಶ್ಲೋಕವನ್ನು ಪಠಿಸಿದ್ದಾರೆ. 
ಇದೇ ವೇಳೆ ಭಯೋತ್ಪಾದನೆ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ತಾರತಮ್ಯ ಮಾಡುವುದೂ ಸಹ ಅಪಾಯಕಾರಿ ಎಂದು ಮೋದಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ದೆಹಲಿಯಲ್ಲಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್; ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬೀಳುತ್ತಾ ತೆರೆ? ಕುತೂಹಲ ಮೂಡಿಸಿದ ಕಾಂಗ್ರೆಸ್ ಸಭೆ..!

ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆವರೆಗೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಅಬ್ರಹಾಂ ಒಪ್ಪಂದಕ್ಕೆ 'NO' ಎಂದ ಪಾಕಿಸ್ತಾನ, ಟ್ರಂಪ್ ರಾಜತಾಂತ್ರಿಕ ಯತ್ನಕ್ಕೆ ಹಿನ್ನೆಡೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ನನಗೆ 'CM ವಿಜಯ್' ಕಂಡ್ರೆ ಅಸೂಯೆ: ಸಾರ್ವಜನಿಕವಾಗಿ ಸತ್ಯ ಒಪ್ಪಿಕೊಂಡ ಆಂಧ್ರ DCM ಪವನ್ ಕಲ್ಯಾಣ್!

SCROLL FOR NEXT