ಅಮೆರಿಕಾ ಡ್ರೋನ್ ದಾಳಿ, ಹಕ್ಕಾನಿ ಕಮಾಂಡರ್ ಸೇರಿ ಮೂವರು ಸಾವು
ಪೇಶಾವರ: ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಅಮೆರಿಕಾ ನಡೆಸಿದ ಡ್ರೋನ್ ದಾಳಿಯಿಂದ ಹಕ್ಕಾನಿ ಸಂಘಟನೆಯ ಕಮಾಂಡರ್ ಸೇರಿ ಇನ್ನೂ ಇಬ್ಬರು ಹತ್ಯೆಯಾಗಿದ್ದಾರೆ ಎಂದು ಮಾದ್ಯಮವೊಂದು ವರದಿ ಮಾಡಿದೆ.
ಸ್ಪೀನ್ ತಾಲ್ ಪ್ರದೇಶದಲ್ಲಿರುವ ಮನೆಯ ಮೇಲೆ ಡ್ರೋನ್ ದಾಳಿ ನಡೆಸಿದ ವೇಳೆ ಈ ಹತ್ಯೆ ನಡೆದಿದೆ. ಹಕ್ಕಾನಿ ಸಂಘಟನೆಯ ಕಮಾಂಡರ್ ಎಹ್ಸಾನ್ ಅಲಿಯಾಸ್ ಖವಾರಿ ಮತ್ತು ಅವರ ಇಬ್ಬರು ಸಹಚರರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಉತ್ತರ ವೆಝೀರಿಸ್ತಾನದಲ್ಲಿ ನಡೆಸಿದ ದಾಳಿ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಡಾನ್ ಸುದ್ದಿಸಂಥೆ ವರದಿ ಮಾಡಿದೆ.
ಅಫ್ಘಾನ್ ನಿರಾಶ್ರಿತರಿಗೆ ಸೇರಿದ ಮನೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾದ ಗೂ17, ಢಚರ ವಿಮಾನಗಳು ಈ ದಾಳಿ ಸಂಯೋಜಿಸಿದೆ ಎಂದು ವರದಿಯಲ್ಲಿ ಹೇಳಿದೆ. ಜ.17ರಂದು ಈ ವರ್ಷದ ಮೊದ ಡ್ರೋನ್ ಡಾಲಿ ನಡೆಇದಿದ್ದು ಈ ವೇಳೆ ಪಾಕ್-ಅಫ್ಘಾನ್ ಗಡಿಯ ಸಮೀಪ ಕುರ್ರಾಮ್ ವಲಯದ ಬಾದ್ಶಾ ಕೋಟ್ ಪ್ರದೇಶದ ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ ನಲ್ಲಿ ಹೊಸ ಅಫ್ಘಾನ್ ನೀತಿಯನ್ನು ಪ್ರಕಟಿಸಿದ ನಂತರ ಕುರ್ರಾಮ್ ವಲಯದಲ್ಲಿ ಡ್ರೋನ್ ದಾಳಿಯ ಪ್ರಮಾಣ ಏರಿಕೆ ಕಂಡಿತು.