ವಿದೇಶ

ಡೊನಾಲ್ಡ್ ಟ್ರಂಪ್ ಜೊತೆಗೆ ಸಂಬಂಧ ವದಂತಿ ಆಕ್ರಮಣಕಾರಿ ಮತ್ತು ಅಸಹ್ಯ ಮನೋವೃತ್ತಿ: ನಿಕ್ಕಿ ಹ್ಯಾಲೆ

Sumana Upadhyaya
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ, ಇದು ಅತ್ಯಂತ ಆಕ್ರಮಣಾಕಾರಿ ಮತ್ತು ಅಸಹ್ಯಕರ ಮನೋವೃತ್ತಿಯಾಗಿದೆ ಎಂದಿದ್ದಾರೆ.
ಲೇಖರ ಮೈಕೆಲ್ ವೊಲ್ಫ್ ಅವರ ಫೈರ್ ಅಂಡ್ ಫ್ಯೂರಿ ಪುಸ್ತಕದಲ್ಲಿ ಅವರ ಪುಸ್ತಕದಿಂದ ಈ ವದಂತಿ ಹೊರಬಂದಿದ್ದು, ಸಂದರ್ಶನವೊಂದರಲ್ಲಿ ಅವರು ನಿಕ್ಕಿ ಹ್ಯಾಲೆ ಮತ್ತು ಡೊನಾಲ್ಡ್ ಟ್ರಂಪ್ ಮಧ್ಯೆ ಸಂಬಂಧವಿದ್ದು ಈ ಬಗ್ಗೆ ಪುಸ್ತಕದಲ್ಲಿ ಹೆಚ್ಚಿನ ವಿವರಗಳನ್ನು ನೀಡಿದ್ದೇನೆ ಎನ್ನುತ್ತಾರೆ.
ವೊಲ್ಫ್ ತಮ್ಮ ಪುಸ್ತಕದಲ್ಲಿ, ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ನಿಕ್ಕಿ ಹ್ಯಾಲೆ ಅತ್ಯಂತ ಪ್ರಭಾವಿ ಮಹಿಳೆಯಾಗಿದ್ದು ಅಧ್ಯಕ್ಷರ ಉತ್ತರಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ನಮೂದಿಸಿದ್ದಾರೆ.
ಈ ಬಗ್ಗೆ ಕಳೆದ ಗುರುವಾರ ಪೊಲಿಟಿಕೊಸ್ ಮುಮೆನ್ ರೂಲ್ ಪೊಡ್ ಕಾಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ, ತಮಗೆ ಅಧ್ಯಕ್ಷರ ಜೊತೆ ಸಂಬಂಧವಿದೆ ಎಂಬ ಆರೋಪದಿಂದ ಬೇಸತ್ತಿರುವುದಾಗಿ ಹೇಳಿದ್ದಾರೆ.
ಇದು ಖಂಡಿತಾ ಸತ್ಯವಲ್ಲ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ತೀರಾ ಆಕ್ರಮಣಕಾರಿ ಮತ್ತು ಅಸಹ್ಯಕರ ವರ್ತನೆಯಾಗಿದೆ ಎಂದಿದ್ದಾರೆ.
ಲೇಖಕ ವೊಲ್ಫ್  ನಿಕ್ಕಿ ಹ್ಯಾಲೆಯವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ವಿಮಾನದಲ್ಲಿ ಮತ್ತು ಒವಲ್ ಕಚೇರಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂಬ ಆರೋಪಕ್ಕೆ ನಿಕ್ಕಿ ಹ್ಯಾಲೆ ತಿರುಗೇಟು ನೀಡಿದ್ದಾರೆ.
ಏರ್ ಫೋರ್ಸ್ ಒನ್ ನಲ್ಲಿ ನಾನು ಅಧ್ಯಕ್ಷರ ಜೊತೆ ಒಂದು ಬಾರಿಯಿದ್ದೆ. ಆ ಸಮಯದಲ್ಲಿ ನಮ್ಮ ಜೊತೆ ಹಲವರಿದ್ದರು. ಒವಲ್ ಕಚೇರಿಯಲ್ಲಿ ಹಲವು ಬಾರಿ ನಾನು ನನ್ನ ರಾಜಕೀಯ ಜೀವನ ಕುರಿತು ಅಧ್ಯಕ್ಷರ ಜೊತೆ ಮಾತನಾಡುತ್ತಿರುತ್ತೇನೆ ಎಂದು ವೊಲ್ಫ್ ಪುಸ್ತಕದಲ್ಲಿ ಹೇಳಿದ್ದಾರೆ. ಆದರೆ ನಾನು ಎಂದಿಗೂ ಏಕಾಂಗಿಯಾಗಿ ಅವರ ಜೊತೆ ಇರುವುದಿಲ್ಲ ಮತ್ತು ನನ್ನ ರಾಜಕೀಯ ಜೀವನ ಕುರಿತು ಮಾತನಾಡುವುದಿಲ್ಲ ಎನ್ನುತ್ತಾರೆ.
ಅನೇಕ ಪುರುಷರು ಮಹಿಳೆಯರನ್ನು ಗೌರವಿಸುತ್ತಾರೆ. ಆದರೆ ಕೆಲವು ಪುರುಷರು ಮಹಿಳೆಯರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಮುಕ್ತವಾಗಿ ಮಾತನಾಡುತ್ತಿದ್ದರೆ ಅಂತವರನ್ನು ತುಳಿಯಲು ನೋಡುತ್ತಾರೆ. ಮಾನಸಿಕವಾಗಿ ಕುಗ್ಗಿಸಲು ನೋಡುವ ಮೂಲಕ ಸೋಲಿಸಲು ಪ್ರಯತ್ನಿಸುತ್ತಾರೆ ಎಂದು ಸಂದರ್ಶನದಲ್ಲಿ ನಿಕ್ಕಿ ಹ್ಯಾಲೆ ಆರೋಪಿಸಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಆಗಿರುವ ನಿಕ್ಕಿ ಹ್ಯಾಲೆ, ಸರ್ಕಾರದ ನೀತಿಗಳಲ್ಲಿ ತಾವು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವತ್ತೂ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.
SCROLL FOR NEXT