ಸಾಂದರ್ಬಿಕ ಚಿತ್ರ 
ವಿದೇಶ

ಭಾರತದ ವಿಜ್ಞಾನಿಗಳು, ಶೈಕ್ಷಣಿಕ ತಜ್ಞರಿಗೆ ಹೊಸ ವೀಸಾ ಬಿಡುಗಡೆ ಮಾಡಿದ ಇಂಗ್ಲೆಂಡ್

ಭಾರತೀಯರು ಸೇರಿದಂತೆ ಸಾಗರೋತ್ತರ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಉಪಯೋಗವಾಗುವಂತೆ ...

ಲಂಡನ್: ಭಾರತೀಯರು ಸೇರಿದಂತೆ ಸಾಗರೋತ್ತರ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ಸಂಶೋಧಕರಿಗೆ ಉಪಯೋಗವಾಗುವಂತೆ ಇಂಗ್ಲೆಂಡ್ ಸರ್ಕಾರ ಹೊಸ ವೀಸಾ ಆರಂಭಿಸಿದೆ. ಇದರಿಂದ ಆ ದೇಶದ ಸಂಶೋಧನೆ ವಲಯಗಳಿಗೆ ಪ್ರಯೋಜನವಾಗಲಿದೆ.

ಇಂಗ್ಲೆಂಡಿನಲ್ಲಿ ಈಗಾಗಲೇ ಇರುವ ಟಯರ್ 5 ವೀಸಾದಡಿಯಲ್ಲಿ (ತಾತ್ಕಾಲಿಕ ಕೆಲಸಗಾರರು-ಸರ್ಕಾರಿ ಪ್ರಾಧಿಕಾರ ವಿನಿಮಯ ಕೇಂದ್ರಗಳು) ನೂತನ ವಿಜ್ಞಾನ, ಸಂಶೋಧನೆ ಮತ್ತು ಶೈಕ್ಷಣಿಕ ಯೋಜನೆಗಳಿಗೆ ಐರೋಪ್ಯ ಒಕ್ಕೂಟ ಹೊರತುಪಡಿಸಿ ಬೇರೆ ದೇಶಗಳಿಂದ ಇಂಗ್ಲೆಂಡಿಗೆ 2 ವರ್ಷಗಳ ಅವಧಿಗೆ ಬರುವವರಿಗೆ ನೆರವಾಗಲಿದೆ.

ಸಂಶೋಧನೆ, ಹೊಸ ಆವಿಷ್ಕಾರಗಳಲ್ಲಿ ಇಂಗ್ಲೆಂಡ್ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದು ವಿದೇಶಗಳಿಂದ ಬರುವವರಿಗೆ ಇಲ್ಲಿನ ವೀಸಾ ಸುಲಭವಾಗಿ ಸಿಕ್ಕಿದರೆ ಇಲ್ಲಿಗೆ ಬರಲು ಅನುಕೂಲವಾಗುತ್ತದೆ. ಅಲ್ಲದೆ ಇಲ್ಲಿನ ಸಂಶೋಧನಾ ಮತ್ತು ವಿಜ್ಞಾನ ಉದ್ಯಮರಂಗ ಕೂಡ ಬೆಳೆಯುತ್ತದೆ ಎನ್ನುತ್ತಾರೆ ಇಂಗ್ಲೆಂಡಿನ ವಲಸೆ ಖಾತೆ ಸಚಿವೆ ಕ್ಯಾರೊಲಿನ್ ನೊಕ್ಸ್.

ನಮ್ಮಲ್ಲಿ ವಲಸೆ ವ್ಯವಸ್ಥೆಯ ಅಗತ್ಯವಿದ್ದು ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಪ್ರತಿಭಾವಂತರನ್ನು ಮತ್ತು ವಿಷಯ ತಜ್ಞರನ್ನು ನಮ್ಮ ದೇಶಕ್ಕೆ ಸೆಳೆಯಲು ಅನುಕೂಲವಾಗುತ್ತದೆ ಎಂದರು.

ಸಮಾಜಕ್ಕೆ ಮತ್ತು ಇಂಗ್ಲೆಂಡಿನ ಆರ್ಥಿಕತೆಯಲ್ಲಿ ವಿಜ್ಞಾನ ಕ್ಷೇತ್ರದ ಕೊಡುಗೆಯನ್ನು ನಾವು ಗುರುತಿಸಿದ್ದೇವೆ. ವಿಶ್ವದ ಎಲ್ಲಾ ಭಾಗಗಳಿಂದ ನಾವು ಮುಂಚೂಣಿಯಲ್ಲಿರುವ ವೈಜ್ಞಾನಿಕ ಮತ್ತು ಸಂಶೋಧನಾ ರಂಗಗಳಲ್ಲಿರುವವರನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಇತ್ತೀಚೆಗೆ ಇಂಗ್ಲೆಂಡ್ ಮಾಡಿರುವ ಕೆಲವು ವೀಸಾ ನೀತಿಗಳಲ್ಲಿ ಟಯರ್ 2 ವೀಸಾ ಕ್ಯಾಪ್ ಗಳಿಂದ ವೈದ್ಯರು ಮತ್ತು ದಾದಿಯರನ್ನು ತೆಗೆದುಹಾಕಿರುವುದು, ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಭಾರತೀಯ ವೈದ್ಯರುಗಳ ಸೇರ್ಪಡೆ ಕೂಡ ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT