ಮೃತ ವಿದ್ಯಾರ್ಥಿ ಶರತ್ ಕೊಪ್ಪು
ಕ್ಯಾನ್ಸಾಸ್: ಭಾರತೀಯ ಶ್ರೀನಿವಾಸ್ ಕುಚ್ಚಿಬೋಟ್ಲಾ ಸಾವಿನ ಪ್ರಕರಣ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಅಮೆರಿಕದ ಕ್ಯಾನ್ಸಾಸ್ ನಲ್ಲಿ ನಡೆದಿದೆ.
ಕ್ಯಾನ್ಸಾಸ್ ನ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಬ್ಯಾಸ ನಡೆಸುತ್ತಿದ್ದ 26 ವರ್ಷದ ದಕ್ಷಿಣ ಭಾರತ ಮೂಲದ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ.
ಕ್ಯಾನ್ಸಾಸ್ ನ ಮಾರ್ಕೆಟ್ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಶರತ್ ಕೊಪ್ಪು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಶರತ್ ರನ್ನು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗ ಮಧ್ಯೆ ಶರತ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಇದೇ ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕುಚ್ಚಿಬೋಟ್ಲಾರನ್ನು ಅಮೆರಿಕ ನೌಕಾದಳದ ಅಧಿಕಾರಿಯೊಬ್ಬ ಗುಂಡಿಟ್ಟು ಕೊಂದು ಹಾಕಿದ್ದ. ಮೇ ತಿಂಗಳಲ್ಲಿ ಈ ಪ್ರಕರಣದ ತೀರ್ಪು ಬಂದಿದ್ದು, ಆರೋಪಿ ಆ್ಯಡಂ ಪುರಿಂಟನ್ ಗೆ ಅಮೆರಿಕ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.