ವಾಷಿಂಗ್ಟನ್ : ಹುಡುಗಿಯರಿಗೆ ಶಿಕ್ಷಣ ನಿರಾಕರಣೆಯಿಂದ ಜಾಗತಿಕ ಆರ್ಥಿಕತೆಗೆ 15ರಿಂದ 30 ಟ್ರಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗುತ್ತಿದೆ ಎಂದು ವಿಶ್ವಬ್ಯಾಂಕ್ ಇಂದು ಹೇಳಿಕೆ ನೀಡಿದೆ.
ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ಎರಡು ಮೂರಕ್ಕಿಂತಲೂ ಕಡಿಮೆ ಬಾಲಕಿಯರು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಮೂರು ಬಾಲಕಿಯರ ಪೈಕಿ ಕೇವಲ ಒಬ್ಬರು ಪ್ರೌಢ ಶಿಕ್ಷಣದ ಹಂತವನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಕಳೆದುಹೋದ ಅವಕಾಶಗಳು: ಬಾಲಕಿಯರ ಶಿಕ್ಷಣಕ್ಕೆ ಮಾಡದಿರುವ ವೆಚ್ಚ ಕುರಿತ ವರದಿಯಲ್ಲಿ ಹೇಳಲಾಗಿದೆ.
ಅನೇಕ ವಯಸ್ಸು ಮಹಿಳೆಯರು 12 ವರ್ಷದವರೆಗೂ ಶಿಕ್ಷಣಪೂರ್ಣಗೊಳಿಸದಿರುವುದರಿಂದ ಮಾನವ ಸಂಪನ್ಮೂಲ ನಷ್ಟವಾಗುತ್ತಿದ್ದು, ಇದರಿಂದಾಗಿ ಜಾಗತಿಕವಾಗಿ 15ರಿಂದ 30 ಟ್ರಿಲಿಯನ್ ಡಾಲರ್ ನಷ್ಟು ನಷ್ಟ ಆಗುತ್ತಿದೆ ಎಂದು ವಿಶ್ವಸಂಸ್ಥೆಯ ಮಾಲಾಲಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಲಾಗಿದೆ.
ಪ್ರೌಢ ಶಿಕ್ಷಣ ಪಡೆದು ಕೆಲಸ ಮಾಡುತ್ತಿರುವ ಹುಡುಗಿಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರ ಹೆಚ್ಚಿನ ಶಿಕ್ಷಣ ಇಲ್ಲದಿರುವುದರಿಂದ ಅವರ ಆದಾಯ ಕಡಿಮೆ ಮಟ್ಟದಿಂದ ಕೂಡಿದೆ ಎನ್ನಲಾಗಿದೆ.
ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಪ್ ಝಾಯಿ 2012ರಲ್ಲಿ ಮಹಿಳಾ ಶಿಕ್ಷಣದ ಪರ ಪ್ರಚಾರ ನಡೆಸುತ್ತಿರುವಾಗ ತಾಲಿಬಾನ್ ಉಗ್ರರು ಆಕೆಯ ತಲೆಗೆ ಗುಂಡಿನ ದಾಳಿ ನಡೆಸಿದ್ದರು.
ನಂತರ ಜುಲೈ 12 , 2013ರಲ್ಲಿ 16ನೇ ವಯಸ್ಸಿನಲ್ಲಿ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮಲಾಲಾ ಯೂಸಪ್ ಝಾಯಿ, ವಿಶ್ವದಾದ್ಯಂತ ಮಹಿಳೆಯರಿಗೆ ಶಿಕ್ಷಣ ಕಲ್ಪಿಸುವಂತೆ ಕರೆ ನೀಡಿದ್ದರು. ಈ ಸಮಾರಂಭವನ್ನು ವಿಶ್ವಸಂಸ್ಥೆ ಮಲಾಲಾ ದಿನವನ್ನಾಗಿ ಆಚರಿಸುತ್ತಾ ಬಂದಿದೆ.
21 ವರ್ಷ ಪೂರ್ಣಗೊಳಿಸಿರುವ ಮಲಾಲಾ ಮಾತನಾಡಿ, ಸರಿಯಾದ ಶಿಕ್ಷಣ ಸಿಗದೆ 130 ಮಿಲಿಯನ್ ಹುಡುಗಿಯರು ಎಂಜಿನಿಯರ್ ಅಥವಾ ಪತ್ರಕರ್ತರು , ಅಥವಾ ಸಿಇಓ ಆಗಲು ಸಾಧ್ಯವಾಗಿಲ್ಲ ಇದರಿಂದಾಗಿ ವಿಶ್ವದಲ್ಲಿ ಸಾವಿರಾರು ಟ್ರಿಲಿಯನ್ ಡಾಲರ್ ನಷ್ಟು ನಷ್ಟವಾಗುತ್ತಿದೆ. ಜಾಗತಿಕ ಆರ್ಥಿಕತೆ, ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆಯಲ್ಲಿ ಸದೃಢತೆ ಸಾಧಿಸಬೇಕಾಗಿದೆ ಎಂದು ಹೇಳಿದರು.
ಒಂದು ವೇಳೆ ನಾಯಕರು ಉತ್ತಮ ವಿಶ್ವ ರೂಪಿಸುವುದನ್ನು ಗಂಭೀರವಾಗಿ ತೆಗೆದುಕೊಂಡರೆ, ಹುಡುಗಿಯರ ಪ್ರೌಢ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾದ ಅಗತ್ಯವಿದೆ. ಇದಕ್ಕೆ ಈ ವರದಿಯೇ ಹೆಚ್ಚಿನ ಸಾಕ್ಷ್ಯಧಾರವಾಗಿದೆ ಎಂದು ಮಲಲಾ ನಿಧಿ ಸಹ ಸಂಸ್ಥಾಪಕರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics