ನವಾಜ್ ಷರೀಪ್ 
ವಿದೇಶ

ಪಾಕಿಸ್ತಾನದಲ್ಲಿ ಜು. 25 ಮರೆಯಲಾಗದ ದಿನವನ್ನಾಗಿ ಮಾಡಿ : ಮತದಾರರಿಗೆ ಷರೀಫ್ ಕರೆ

ಜುಲೈ 25 ದಿನವನ್ನು ಮರೆಯಲಾಗದಂತಹ ದಿನವನ್ನಾಗಿ ಮಾಡುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್ ಅಲ್ಲಿನ ಮತದಾರರಿಗೆ ಕರೆ ನೀಡಿದ್ದಾರೆ.

ಪಾಕಿಸ್ತಾನ: ಪ್ರಸ್ತುತ  ರಾವಲ್ಪಿಂಡಿಯ ಅಡಿಯಾ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್  ಜುಲೈ 25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ  ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಬಂದು ತಮ್ಮ ಮತ  ಚಲಾಯಿಸುವಂತೆ ಭಾವುಕರಾಗಿ ಮನವಿ ಮಾಡಿದ್ದಾರೆ.

ಲಂಡನ್ ನಲ್ಲಿ  ರೇಕಾರ್ಡ್ ಆಗಿರುವ ಆಡಿಯೋ ಸಂದೇಶವನ್ನು ಇಂದು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.   ಜುಲೈ 25 ದಿನವನ್ನು ಮರೆಯಲಾಗದಂತಹ ದಿನವನ್ನಾಗಿ ಮಾಡುವಂತೆ ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 ನಿಮ್ಮ ಅಮೂಲ್ಯ ಮತಕ್ಕೆ ಗೌರವ ನೀಡಿ. ರಾಷ್ಟ್ರಧ್ವಜ ತೆಗೆದುಕೊಂಡು ಹೋಗಿ ಮತ ಚಲಾಯಿಸಿ,ಈ ಸಂದೇಶವನ್ನು  ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಮುಟ್ಟಿಸಿ. ಯಾರೂ ಮತದಾನಕ್ಕೆ ಗೌರವ ನೀಡುವುದಿಲ್ಲವೂ ಅವರು ಅವರ ತಲೆಗೆ ಅವರೇ ಕುಣಿಕೆ ಹಾಕಿಕೊಡಂತೆ  ಆಗಲಿದೆ ಎಂದು ಷರೀಫ್ ಹೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿ ಕುಲ್ ಸೊಮ್ ನವಾಜ್  ಬೇಗ ಗುಣಮುಖರಾಗಲಿ  ಎಂದು ಪ್ರಾರ್ಥನೆ ಸಲ್ಲಿಸಿ ಎಂದು ಅವರು ದೇಶದ ಜನರನ್ನು ಒತ್ತಾಯಿಸಿದ್ದಾರೆ.  ಪಾಕಿಸ್ತಾನ ಹಾಗೂ ಅಲ್ಲಿನ ಜನರೊಂದಿಗೆ ಬಾಂಧವ್ಯ ಗಟ್ಟಿಯಾಗಿದ್ದು, ಎಂದಿಗೂ ಮುರಿಯುವುದಿಲಲ ಎಂದು ಅವರು ವಿಶ್ವಾಸದ ಮಾತುಗಳ್ನಾಡಿದ್ದಾರೆ.

ಇಡೀ ದೇಶ ದೊಡ್ಡ ಕಾರಾಗೃಹವಾಗಿ ಮಾರ್ಪಟ್ಟಿದೆ ಎಂದು ಮೂರು ಬಾರಿಯ ಮಾಜಿ ಪ್ರಧಾನಿ ಆರೋಪಿಸಿದ್ದು, ದೇಶದ ಜನರು ಸಂಕೋಚವನೆಲ್ಲಾ ಬಿಟ್ಟು, ಸ್ವಾತಂತ್ರವಾಗಿ ಇರುವಂತೆ ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ