ನೀವು ಪುಟಿನ್ ಎದುರು ಸೆಲ್ಫಿ, ಆಟೋಗ್ರಾಫ್ ಗಾಗಿ ನಿಂತ ಹಾಗಿತ್ತು: ಟ್ರಂಪ್ ಬಗ್ಗೆ ಆರ್ನಾಲ್ಡ್ ವ್ಯಂಗ್ಯ
ವಾಷಿಂಗ್ ಟನ್: ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವಿಪಕ್ಷೀಯ ಸಭೆ ನಡೆಸಿದ್ದು, ಈ ನಂತರ ನಡೆದ ಪತ್ರಿಕಾಗೋಷ್ಠಿ ಬಗ್ಗೆ ಹಿರಿಯ ನಟ ಹಾಗೂ ಕ್ಯಾಲಿಫೋರ್ನಿಯಾದ ಮಾಜಿ ಗೌರ್ನರ್ ಆರ್ನಾಲ್ಡ್ ಶ್ವಾರ್ಜಿನೆಗ್ಗರ್ ವ್ಯಂಗ್ಯವಾಡಿದ್ದಾರೆ.
ಪುಟಿನ್-ಟ್ರಂಪ್ ಸಭೆ ನಡೆದ ಬಳಿಕ ಅಲ್ಲಿ ದ್ವಿಪಕ್ಷೀಯ ಪತ್ರಿಕಾಗೋಷ್ಠಿ ನಡೆಯಿತಾದರೂ, ಡೊನಾಲ್ಡ್ ಟ್ರಂಪ್ ಪುಟಿನ್ ಎದುರು ಸೆಲ್ಫಿ, ಆಟೋಗ್ರಾಫ್ ಗಾಗಿ ನಿಂತ ಹಾಗಿತ್ತು ಎಂದು ಗೇಲಿ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಟ್ರಂಪ್-ಪುಟಿನ್ ಜಂಟಿ ಪತ್ರಿಕಾಗೋಷ್ಠಿ ಬಗ್ಗೆ ಮಾತನಾಡಿರುವ ಅವರು, ಅಧ್ಯಕ್ಷರೇ, ನಿಮ್ಮ ಹಾಗೂ ಪುಟಿನ್ ಅವರ ಪತ್ರಿಕಾಗೋಷ್ಠಿಯನ್ನು ನೋಡಿದೆ. ಅದು ಮುಜುಗರ ಉಂಟುಮಾಡುವಂತಿತ್ತು, ಅಂದರೆ ನೀವು ಪುಟಿನ್ ಎದುರು ಸೆಲ್ಫಿ, ಆಟೋಗ್ರಾಫ್ ಗಾಗಿ ನಿಂತ ಹಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.
"ಈವರೆಗೂ ಟ್ರಂಪ್, ನಮ್ಮ ಸಮುದಾಯವನ್ನು ಮಾರಾಟ ಮಾಡಿದರು, ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮಾರಾಟ ಮಾಡಿದರು ಕೊನೆಗೆ ಪತ್ರಿಕಾಗೋಷ್ಠಿಯಲ್ಲಿ ನಮ್ಮ ದೇಶಕ್ಕೇ ಮುಜುಗರ ಉಂಟುಮಾಡಿದರು" ಎಂದು ಆರ್ನಾಲ್ಡ್ ಹೇಳಿದ್ದಾರೆ.