ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಆರಂಭವಾಗಿದ್ದು, ಪಾಕಿಸ್ತಾನದಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ.
ಪನಾಮ ಪೇಪರ್ ಹಗರಣದಿಂದಾಗಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ತುತ್ತಾಗಿರುವ ನವಾಜ್ ಷರೀಫ್ ಗೆ ಪ್ರಸಕ್ತ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಅವರ ಪ್ರಬಲ ಎದುರಾಳಿ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಇಮ್ರಾನ್ ಖಾನ್ ಕೂಡ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಇಮ್ರಾನ್ ಖಾನ್ ಗೆ ಅವರ ಮಾಜಿ ಪತ್ನಿಯೇ ವಿರುದ್ಧ ನಿಂತಿದ್ದು, ಇದೇ ವಿಚಾರವನ್ನು ಅವರ ವಿರೋಧಿ ಪಕ್ಷಗಳ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ.
ಇನ್ನು ಮುಂಬೈ ದಾಳಿಕೋರ ಉಗ್ರರ ರೂವಾರಿ ಹಫೀಜ್ ಸಯ್ಯೀದ್ ಕೂಡ ಸ್ಥಳೀಯ ಪಕ್ಷವೊಂದರ ಬೆಂಬಲದೊಂದಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪಾಕಿಸ್ತಾನ ರಾಜಕೀಯದ ಕಿಂಗ್ ಮೇಕರ್ ಆಗಲು ಹೊರಟಿದ್ದಾನೆ.
ಒಟ್ಟಾರೆ ಇಂದು ನಡೆಯುತ್ತಿರುವ ಪಾಕಿಸ್ತಾನ ಚುನಾವಣೆ ತೀವ್ರ ಕುತೂಹ ಕೆರಳಿಸಿದೆ.