ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿಜಿನ್ ಪಿಂಗ್ 
ವಿದೇಶ

ಮೋದಿ-ಕ್ಸಿ ಮಾತುಕತೆ: ಚೀನಾ ರಕ್ಷಣಾ ಸಚಿವ ಭಾರತಕ್ಕೆ ಭೇಟಿ, ಚೀನಾಗೆ ದೋವಲ್ ಭೇಟಿ

ಚೀನಾದ ರಕ್ಷಣಾ ಸಚಿವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲು ಮತ್ತು ತಮ್ಮ ಇತ್ತೀಚಿನ ಮಾತುಕತೆಗಳ, ಒಪ್ಪಂದದ ಅನುಷ್ಠಾನನಕ್ಕೆ ಕ್ರಮ ಕೈಗೊಳ್ಳಲು....

ಜೊಹಾನ್ಸ್ ಬರ್ಗ್: ಚೀನಾದ ರಕ್ಷಣಾ ಸಚಿವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲು ಮತ್ತು ತಮ್ಮ ಇತ್ತೀಚಿನ ಮಾತುಕತೆಗಳ, ಒಪ್ಪಂದದ ಅನುಷ್ಠಾನನಕ್ಕೆ ಕ್ರಮ ಕೈಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿಜಿನ್ ಪಿಂಗ್ ಒಪ್ಪಿಗೆ ಸೂಚಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಜೊಹಾನ್ಸ್ ಬರ್ಗ್ ಗೆ ಆಗಮಿಸಿರುವ ಮೋದಿ, ಕ್ಸಿ ಅವರನ್ನು ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿಗೆ ಭೇಟಿಯಾದರು.
"ಎರಡೂ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳಿಸಲು, ಈ ಒಪ್ಪಂದಗಳ ಅನುಷ್ಟಾನದ ವೇಗ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ನಮ್ಮ ನಡುವಿನ ಮಾತುಕತೆ ನಿಯತವಾಗಿರಬೇಕು.ಅಗತ್ಯವಾದಾಗ ಸರಿಯಾದ ಸೂಚನೆಗಳನ್ನು ನೀಡಬೇಕು" ಮೋದಿ ಚೀನಾ ಅಧ್ಯಕ್ಷರಿಗೆ ತಿಳಿಸಿದ್ದಾರೆ.
ತಮ್ಮ ಇತ್ತೀಚಿನ ಸಭೆಗಳು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಿದೆ. ಎರಡು ರಾಷ್ಟ್ರಗಳ ಪರಸ್ಪರ ಸಹಕಾರಕ್ಕಾಗಿ ಹೊಸ ಅವಕಾಶ ಒದಗಿಸಲಾಗುತ್ತದೆ.ಎಂದು ಮೋದಿ ಚೀನಾ ಅಧ್ಯಕ್ಷರಿಗೆ ತಿಳಿಸಿದರು. ವುಹಾನ್ ನಲ್ಲಿನ ಅನೌಪಚಾರಿಕ ಭೇಟಿಯ ಬಳಿಕ ದ್ವಿಪಕ್ಷೀಯ ಸಂಬಂಧಗ ಸಮರ್ಪಕ ಮುಂದುವರಿಕೆಗೆ ಚೀನಾ ತಂಡವು ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅಧ್ಯಕ್ಷ ಕ್ಸಿ ಹೇಳಿದ್ದಾರೆ. ಎಂದು ಚೀನಾ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಹತ್ವದ ವಿಭಾಗಗಳಲ್ಲಿನ ಸಂಪರ್ಕ ಬಲವರ್ಧನೆ, ಪರಸ್ಪರ ವಿಶ್ವಾಸ ಹೆಚ್ಚಳ, ಪ್ರಾಯೋಗಿಕ ಸಹಕಾರಕ್ಕೆ ಉತ್ತೇಜನ, ಸಾಂಸ್ಕೃತಿಕ ವಿನಿಮಯ ಹಾಗೂ ಭಿನ್ನಾಭಿಪ್ರಾಯಗಳ ಸಮರ್ಪಕ ನಿರ್ವಹಣೆ ಕುರಿತಂತೆ ಎರಡೂ ದೇಶದ ನಾಯಕರು ಮಾತನಾಡಿದ್ದಾರೆ.
ಜೊಹಾನ್ಸ್ ಬರ್ಗ್ ಸಭೆಯು ನಮಗೆ ಚೀನಾದೊಡನೆ ಅಭಿವೃದ್ಧಿ ಪಾಲುದಾರಿಕೆಯನ್ನು ಬಲಪಡಿಸಲು ಮತ್ತಷ್ಟು ಅವಕಾಶವನ್ನು ಒದಗಿಸಿದೆ ಎಂದು ಮೋದಿ ಹೇಳಿದರು. ಎರಡೂ ರಾಷ್ಟ್ರಗಳು ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವುದು,ಅಗತ್ಯವಾಗಿದೆ. ಈ ಸಂಬಂಧ ಅವರು ತಮ್ಮ ಸೇನಾ ನಾಯಕರಿಗೆ ಪರಸ್ಪರ ಸಂವಹನ ನಡೆಸಲು ಸೂಚಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ. ಇಬ್ಬರು ನಾಯಕರು ನಡೆಸಿದ ಮಾತುಕತೆಯ ಫ್ಲಶ್ರುತಿ ಉತ್ತಮವಾಗಿರಲಿದೆ, ಮೋದಿ ಹಾಗೂ ಕ್ಸಿ ಅವರಿಗೆ ಈ ಮಾತುಕತೆ ತೃಪ್ತಿ ತಂದಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರನ್ನು ಗಡಿ ವಿವಾದ ಸಂಬಂಧ ನಡೆಯುವ ವಿಶೇಷ ಪ್ರತಿನಿಧಿ ಮಟ್ಟದ ಮಾತುಕತೆಗೆ ಈ ವರ್ಷ ಚೀನಾಗೆ ಕಳಿಸಲು ಧಾನಿ ಮೋದಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT