ವಿದೇಶ

ಬ್ರಿಕ್ಸ್ ಶೃಂಗಸಭೆ: ಪ್ರಧಾನಿ ಮೋದಿ-ಚೀನಾ ಅಧ್ಯಕ್ಷರ ಭೇಟಿ, ದ್ವಿಪಕ್ಷೀಯ ಸಂಬಂಧದ ಕುರಿತು ಚರ್ಚೆ

Srinivasamurthy VN
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಭೇಟಿ ಮಾಡಿದರು.
ಬ್ರಿಕ್ಸ್ ಸಮಾವೇಶದ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ಗೆ ತೆರಳಿರುವ ಪ್ರಧಾನಿ ಮೋದಿ, ಅಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಭೇಟಿ ಮಾಡಿದರು. ಈ ವೇಳೆ ಪರಸ್ಪರ ಹಸ್ತಲಾಘವದ ಮೂಲಕ ಉಭಯ ನಾಯಕರು ಉಭಯ ಕುಶಲೋಪರಿ ವಿಚಾರಿಸಿದರು. ಅಂತೆಯೇ ಉಭಯ ನಾಯಕರು ಉಭಯ ದೇಶಗಳ ನಡುವಿನ ಸಾಮಾನ್ಯ ವಿಚಾರಗಳ ಕುರಿತು ಚರ್ಚಿಸಿದರು. ಪ್ರಮುಖವಾಗಿ ದ್ವಿಪಕ್ಷೀಯ ಸಂಬಂಧ, ವಾಣಿಜ್ಯ ಸಂಪರ್ಕ ಮತ್ತು ಗಡಿ ವಿಚಾರಗಳ ಕುರಿತು ಉಭಯ ನಾಯಕರ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಕಾರ್ಯಾಲಯ ಉಭಯ ನಾಯಕರ ಮತ್ತೊಂದು ಭೇಟಿ ಉಭಯ ದೇಶಗಳ ನಡುವಿನ ಸಂಬಂಧ ಗಟ್ಟಿಗೊಳ್ಳಲು ಸಹಕರಿಸುತ್ತದೆ ಎಂದು ಹೇಳಿದೆ.
ಕೇವಲ 4 ತಿಂಗಳ ಅವಧಿಯಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು 3ನೇ ಬಾರಿ ಭೇಟಿ ಮಾಡುತ್ತಿದ್ದು, ಈ ಹಿಂದೆ ಚೀನಾದ ವುಹಾನ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಉಭಯ ನಾಯಕರು ಭೇಟಿ ಮಾಡಿದ್ದರು. ಆ ವೇಳೆ ಸ್ವತಃ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೇ ವುಹಾನ್ ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದರು. ಈ ವೇಳೆ ಕ್ಸಿ ಜಿನ್ ಪಿಂಗ್ ರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಬೀಜಿಂಗ್ ನಿಂದ ಹೊರಗೆ ಚೀನಾ ಅಧ್ಯಕ್ಷರಿಂದ ಸ್ವಾಗತ ಪಡೆದ ವಿಶ್ವದ ಮೊದಲ ನಾಯಕ ನಾನು ಎಂದು ಹಾಸ್ಯ ಚಟಾಕಿ ಹಾರಿಸಿದ್ಗರು.
SCROLL FOR NEXT