ಚೀನಾ ಸಾಲಗಳನ್ನು ಮರುಪಾವತಿಸಲು ಪಾಕ್ ಗೆ ಐಎಂಎಫ್ ಆರ್ಥಿಕ ನೆರವು ಇಲ್ಲ: ಅಮೆರಿಕ 
ವಿದೇಶ

ಚೀನಾ ಸಾಲ ಮರುಪಾವತಿಸಲು ಪಾಕ್ ಗೆ ಐಎಂಎಫ್ ಆರ್ಥಿಕ ನೆರವು ಇಲ್ಲ: ಅಮೆರಿಕ

ಚೀನಾ ಸಾಲ ಮರುಪಾವತಿ ಮಾಡುವುದಕ್ಕಾಗಿ ಪಾಕಿಸ್ತಾನ ಐಎಂಎಫ್ ಹಣ ಬಳಸುವಂತಿಲ್ಲ ಎಂದು ಅಮೆರಿಕ ಹೇಳಿದೆ.

ಚೀನಾ ಸಾಲ ಮರುಪಾವತಿ ಮಾಡುವುದಕ್ಕಾಗಿ ಪಾಕಿಸ್ತಾನ ಐಎಂಎಫ್ ಹಣ ಬಳಸುವಂತಿಲ್ಲ ಎಂದು ಅಮೆರಿಕ ಹೇಳಿದೆ. 
ಅಮೆರಿಕದ ಸಚಿವ ಮೈಕ್ ಪೊಂಪೀ ಸಿಎನ್ ಬಿಸಿ ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನದ ಹೊಸ ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಾವು ಎದುರು ನೋಡುತ್ತಿದ್ದೇವೆ, ಆದರೆ ಚೀನಾದ ಸಾಲವನ್ನು ಮರುಪಾವತಿ ಮಾಡುವುದಕ್ಕಾಗಿ ಪಾಕಿಸ್ತಾನಕ್ಕೆ ನಾವು ಯಾವುದೇ ಆರ್ಥಿಕ ನೆರವನ್ನೂ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಐಎಂಎಫ್ ಫಂಡಿಂಗ್ ನಲ್ಲಿ ಅಮೆರಿಕದ್ದೂ ಪಾಲಿದ್ದು, ಐಎಂಎಫ್ ನಿಂದ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫೈನಾನ್ಶಿಯಲ್ ಟೈಮ್ಸ್ ವರದಿಯ ಪ್ರಕಾರ ಪಾಕಿಸ್ಥಾನದ ಹಿರಿಯ ಅಧಿಕಾರಿಯೊಬ್ಬರು  ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ ಗೆ ಐಎಂಎಫ್ ನಿಂದ 12 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲು ಸಲಹೆ ನೀಡಿದ್ದರು. 
ಈ ಬಗ್ಗೆ ಐಎಂಎಫ್ ಪ್ರತಿಕ್ರಿಯೆ ನೀಡಿರುವ ಐಎಂಎಫ್ ವಕ್ತಾರ, ಈ ವರೆಗೂ ಪಾಕಿಸ್ತಾನದಿಂದ ನಮಗೆ ಆರ್ಥಿಕ ನೆರವಿಗಾಗಿ ಮನವಿ ಬಂದಿಲ್ಲ ಎಂದು ಹೇಳಿದ್ದಾರೆ.  ಪಾಕಿಸ್ತಾನ ಆರ್ಥಿಕ ಮುಗ್ಗಟ್ಟಿನಿಂದ ಬಳುತ್ತಿದ್ದು, 5 ವರ್ಷಗಳಲ್ಲಿ ಎರಡನೇ ಬಾರಿಗೆ ಐಎಂಎಫ್ ನಿಂದ ಆರ್ಥಿಕ ಸಹಾಯ ಕೇಳುವ ಸ್ಥಿತಿಗೆ ಪಾಕಿಸ್ತಾನ ಬಂದು ನಿಂತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಪ್ರಧಾನ್ ರಾಜೀನಾಮೆಯಿಂದ ಭಾರತ ಅಸ್ಥಿರಗೊಳಿಸುವ ವಿದೇಶಿ ಶಕ್ತಿಗಳ ಸಂಚು ವಿಫಲ': ಕೈಲಾಶ್ ವಿಜಯವರ್ಗೀಯ

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ: ಪ್ರಧಾನ್ ಗೆ ಪರ್ಯಾಯ? ಅನುಭವ, ಇತಿಹಾಸ! ಇಲ್ಲಿದೆ ಮಾಹಿತಿ

ಹುಂಡಿ ಹಣ ದೋಚಿದ ಪ್ರಕರಣ: ತಮಿಳುನಾಡಿನ ಪ್ರಸಿದ್ಧ ದೇವಾಲಯದ 8 ಅಧಿಕಾರಿಗಳು ಅಮಾನತು

'ವಿದ್ಯಾರ್ಥಿಗಳ ಮೇಲಿನ ಕ್ರೌರ್ಯಕ್ಕೆ ಹೊಣೆ ಯಾರು?' ಅಮಿತ್ ಶಾಗೆ ರಾಹುಲ್ ಗಾಂಧಿ ಪತ್ರ; ಪೊಲೀಸ್ ದೌರ್ಜನ್ಯಕ್ಕೆ ಉತ್ತರಿಸುವಂತೆ ಆಗ್ರಹ

ಪ್ರಧಾನ್ ರಾಜೀನಾಮೆ ಸಾಲದು; ಪಾರದರ್ಶಕ ಪರೀಕ್ಷೆ, ಕೈಗೆಟುಕುವ ಶಿಕ್ಷಣಕ್ಕೆ ಒತ್ತು ನೀಡಿ: ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳ ಆಗ್ರಹ